ಕರ್ನಾಟಕ

karnataka

ETV Bharat / state

ಹಳೇ ದ್ವೇಷ : ಹುಬ್ಬಳ್ಳಿಯಲ್ಲಿ ಯುವಕನಿಗೆ ಚಾಕು ಇರಿದು ಕೊಲೆಗೆ ಯತ್ನ - ಸ್ಥಳಕ್ಕೆ ಅಶೋಕ ನಗರ ಠಾಣೆ ಪೊಲೀಸರು ಭೇಟಿ

ಹುಬ್ಬಳ್ಳಿಯಲ್ಲಿ ಯುವಕನ ಮೇಲೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

young man was stabbed  young man was stabbed and attempted murder  stabbed and attempted murder in Hubli  ಹಳೇ ದ್ವೇಷ ಹಿನ್ನೆಲೆ  ಹುಬ್ಬಳ್ಳಿಯಲ್ಲಿ ಯುವಕನಿಗೆ ಚಾಕು ಇರಿದು ಕೊಲೆಗೆ ಯತ್ನ  ಯುವಕ ಮೇಲೆ ಚಾಕುಯಿಂದ ಇರಿದು ಕೊಲೆಗೆ ಯತ್ನ  ಯುವಕ ಮೇಲೆ ಚಾಕುಯಿಂದ ಇರಿದು ಕೊಲೆಗೆ ಯತ್ನ  ಸ್ಥಳಕ್ಕೆ ಅಶೋಕ ನಗರ ಠಾಣೆ ಪೊಲೀಸರು ಭೇಟಿ  ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಹಳೇ ದ್ವೇಷ ಹಿನ್ನೆಲೆ

By

Published : Nov 10, 2022, 12:09 PM IST

ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಇಲ್ಲಿನ ಮಾಧವ ನಗರದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಮಾಧವ ನಗರದ ಅಕ್ಷಯ ಕಾಳೆ ಎಂಬ ಯುವಕನ ಮೇಲೆ ರಿಯಾಜ್ ಎಂಬಾತ ದೇಹದ ಏಳು ಕಡೆ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ.

ಗಾಯಗೊಂಡ ಯುವಕನನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಶೋಕ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಾಕು ಇರಿದ ಆರೋಪಿಯನ್ನು ಬಂಧಿಸಿದ್ದಾರೆ.

ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

ABOUT THE AUTHOR

...view details