ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಮತ್ತೊಂದು ಅಪರಾಧ ಪ್ರಕರಣ: ಚಾಕು ಇರಿತಕ್ಕೆ ಯುವಕ ಬಲಿ - ನಿಜಾಮೋದ್ದೀನ್ ಕಾಲೋನಿ

ಧಾರವಾಡ ಜಿಲ್ಲೆಯ ಜನತೆ ಶೂಟೌಟ್ ಪ್ರಕರಣ ಮರೆಯುವ ಮುನ್ನವೇ ಧಾರವಾಡದಲ್ಲಿ ಮತ್ತೊಂದು ಅಪರಾಧ ಪ್ರಕರಣ ಜನರ ನಿದ್ದೆಗೆಡಿಸಿದೆ. ಚಾಕು ಇರಿತದಿಂದ ಯುವಕನೋರ್ವ ಸಾವನ್ನಪ್ಪಿದ್ದಾನೆ.

ಚಾಕು ಇರಿತಕ್ಕೆ ಬಲಿಯಾದ ಯುವಕ

By

Published : Sep 30, 2019, 10:16 AM IST

ಧಾರವಾಡ:ಜಿಲ್ಲೆಯ ಜನ ಶೂಟೌಟ್ ಪ್ರಕರಣ ಮರೆಯುವ ಮುನ್ನವೇ ನಗರದಲ್ಲಿ ಮತ್ತೊಂದು ಅಪರಾಧ ಪ್ರಕರಣ ಸದ್ದು ಮಾಡಿದೆ. ಚಾಕು ಇರಿತಕ್ಕೆ ಯುವಕನೋರ್ವ ಬಲಿಯಾಗಿದ್ದಾನೆ.

ಜಿಲ್ಲೆಯ ನಿಜಾಮೊದ್ದೀನ್ ಕಾಲೋನಿ ನಿವಾಸಿ ಜಾಫರ್ ಮಕಾನದಾರ್​ (18) ಚಾಕು ಇರಿತಕ್ಕೊಳಗಾದ ಯುವಕನಾಗಿದ್ದಾನೆ. ಮಣಕಿಲ್ಲಾ ನಿವಾಸಿಯಾಗಿರುವ ಮಹ್ಮದ್ ಜುಬೇರನಿಗೆ ತಡರಾತ್ರಿ ನಿಜಾಮೊದ್ದೀನ್ ಕಾಲನಿ ಬಳಿ ಮಾರಣಾಂತಿಕ ಹಲ್ಲೆ ನಡೆದಿದ್ದು, ಸ್ಥಳದಲ್ಲಿಯೇ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದ ಜುಬೇರನನ್ನು ‌ತಕ್ಷಣವೇ ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ.

ಈ ಘಟನೆ ಶಹರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ABOUT THE AUTHOR

...view details