ಹುಬ್ಬಳ್ಳಿ: ಯುವಕನೊಬ್ಬ ರೈತರಿಂದ ಖರೀದಿಸಿದ್ದ ಕೊತ್ತಂಬರಿ ಸೊಪ್ಪನ್ನು ಚರಂಡಿಯಲ್ಲಿ ತೊಳೆಯುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪು ತೊಳೆಯುವ ವಿಡಿಯೋ ವೈರಲ್! - ಚರಂಡಿ ನೀರಿನಲ್ಲಿ ಕೊತ್ತಂಬರಿ ತೊಳೆಯುವ ಸುದ್ದಿ,
ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪು ತೊಳೆಯುವ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯ ನೋಡಿದ ನೆಟ್ಟಿಗರು ಹೌಹಾರಿದ್ದಾರೆ.
ಚರಂಡಿ ನೀರಿನಲ್ಲಿ ಕೊತ್ತಂಬರಿ ತೊಳೆಯುವ ವಿಡಿಯೋ ವೈರಲ್
ಹೌದು, ಇಲ್ಲಿನ ನೇಕಾರ ನಗರದ ಬಳಿಯ ಈಶ್ವರ ನಗರದ ಸೇತುವೆ ಬಳಿ ಯುವಕನೊಬ್ಬ ರೈತರಿಂದ ಖರೀದಿ ಮಾಡಿದ ಕೊತ್ತಂಬರಿ ಸೊಪ್ಪನ್ನು ಚರಂಡಿ ನೀರಿನಲ್ಲಿ ತೊಳೆಯುತ್ತಿದ್ದ. ಸ್ಥಳೀಯರೊಬ್ಬರು ಇದನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಯುವಕ ಮನೆಗೆ ತೆಗೆದುಕೊಂಡು ಹೋಗಿ ಸ್ವಚ್ಛ ನೀರಿನಲ್ಲಿ ತೊಳೆಯುವುದಾಗಿ ಹೇಳಿದ್ದಾನೆ.
ಇನ್ನು ಕೊತ್ತಂಬರಿ ಸೊಪ್ಪನ್ನು ಚರಂಡಿ ನೀರಿನಲ್ಲಿ ತೊಳೆಯುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ವಿಡಿಯೋ ನೋಡಿ ಹೌಹಾರಿದ್ದಾರೆ.
TAGGED:
coriander washing,