ಕರ್ನಾಟಕ

karnataka

ETV Bharat / state

ಧಾರವಾಡ: ಆಂಬ್ಯುಲೆನ್ಸ್​ನಲ್ಲೇ​ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ! - A woman who gave birth to an ambulance child At Dharwad

ಧಾರವಾಡ ಜಿಲ್ಲಾಸ್ಪತ್ರೆಗೆ ಬರುವಾಗ ಆಂಬ್ಯುಲೆನ್ಸ್​ನಲ್ಲಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಆಂಬ್ಯುಲೆನ್ಸ್​ನಲ್ಲೇ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Dharwad
ಆಂಬ್ಯುಲೆನ್ಸ್​ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

By

Published : Apr 26, 2020, 5:30 PM IST

ಧಾರವಾಡ: ಹೆರಿಗೆಗಾಗಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಗರ್ಭಿಣಿಯೋರ್ವಳು ಆಂಬ್ಯುಲೆನ್ಸ್​ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

ತಾಲೂಕಿನ ಮುರಕಟ್ಟಿಯಿಂದ ಧಾರವಾಡ ಜಿಲ್ಲಾಸ್ಪತ್ರೆಗೆ ಬರುವಾಗ ಆಂಬ್ಯುಲೆನ್ಸ್​ನಲ್ಲಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಆಂಬ್ಯುಲೆನ್ಸ್​ನಲ್ಲೇ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ನೇತ್ರಾವತಿ ನಾಗರಾಜ್ ಶಿರನಲಕರ(23) ಎಂಬ ಮಹಿಳೆ ಮಗುವಿಗೆ ಜನ್ಮ‌ ನೀಡಿದ್ದಾರೆ. ಆಂಬ್ಯುಲೆನ್ಸ್ ಸಿಬ್ಬಂದಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಆಂಬ್ಯುಲೆನ್ಸ್ ಸಿಬ್ಬಂದಿ ಮಂಜುನಾಥ್ ಮುಂದಿನಮನಿ ಪೈಲೆಟ್ ಹಾಗೂ ವಾಹನ ಚಾಲಕ ದೇವೇಂದ್ರ ಎಸ್. ಗಂಗಾಧರ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ತಾಯಿ-ಮಗು ಆರೋಗ್ಯವಾಗಿದ್ದಾರೆ.

For All Latest Updates

TAGGED:

Dharwad news

ABOUT THE AUTHOR

...view details