ಹುಬ್ಬಳ್ಳಿ:ಬಡತನದಿಂದ ಅರ್ಧಕ್ಕೆ ಮೊಟಕುಗೊಳಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ತಮ್ಮ 44ನೇ ವಯಸ್ಸಿನಲ್ಲಿ ಬರೆದು ತಾಲೂಕಿನ ಮಿಶ್ರಿಕೋಟಿಯ ಮಹಿಳೆಯೊಬ್ಬರು ಶಿಕ್ಷಣ ಪಡೆಯಬೇಕೆಂಬ ಉತ್ಸಾಹವನ್ನು ಸಾಬೀತು ಪಡಿಸಿದ್ದಾರೆ.
ಮಹಾದೇವಿ ನಾಯ್ಕರ್ ಮೂಲತ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿದರ್ಜೆ ನೌಕರರಾಗಿದ್ದಾರೆ. ಸದ್ಯ ಇವರು ಪದವಿ ವ್ಯಾಸಂಗ ಮುಗಿಸಿ ಕರ್ತವ್ಯದಲ್ಲಿರುವ ತಮ್ಮ ಇಬ್ಬರೂ ಮಕ್ಕಳ ಸಹಾಯದಿಂದ ಪರೀಕ್ಷೆ ಬರೆದಿದ್ದಾರೆ.