ಹುಬ್ಬಳ್ಳಿ: ನಗರದಲ್ಲಿ ಸತತವಾಗಿ ಮಳೆ ಸುರಿದ ಪರಿಣಾಮ ನಗರದ ಗೋಕುಲ ರಸ್ತೆಯಲ್ಲಿನ ರೇಣುಕಾನಗರದ 7 ನೇ ಕ್ರಾಸ್ನಲ್ಲಿ ಬೃಹತ್ ಗಾತ್ರದ ಮರ ಬುಡಸಮೇತ ಉರುಳಿಬಿದ್ದಿದೆ. ಹೀಗಾಗಿ ಅಕ್ಕಪಕ್ಕದ ಎರಡು ಮನೆಗಳು, ಬೈಕ್ ಭಾಗಶಃ ಜಖಂ ಆಗಿವೆ.
ಲಾಕ್ಡೌನ್ ಇರುವುದರಿಂದ ಮನೆ ಜನಸಂಚಾರ ಕಡಿಮೆ ಇದೆ. ಹೀಗಾಗಿ ಭಾರಿ ಅನಾಹುತ ತಪ್ಪಿದೆ. ಮರ ಬಿದ್ದಿದ್ದರಿಂದ ವಾಹನಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.