ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಮಗು ಕಳ್ಳತನ ಪ್ರಕರಣಕ್ಕೆ ರೋಚಕ ಟ್ವಿಸ್ಟ್; ಕರುಳು ಬಳ್ಳಿಯನ್ನ ಕಿಟಿಕಿಯಿಂದ ಎಸೆದದ್ದು ಹೆತ್ತಮ್ಮನೇ ಅಂತೆ! - Hubballi child theft case

ಹುಬ್ಬಳ್ಳಿಯಲ್ಲಿ ನಡೆದಿದ್ದ ಮಗು ಕಳ್ಳತನಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಮಗುವಿಗೆ ಹಾಲುಣಿಸುವ ನೆಪದಲ್ಲಿ ಐಸಿಯುನಿಂದ ಹೊರ ತಂದಿದ್ದ ಹೆತ್ತ ತಾಯಿಯೇ, ಶೌಚಾಲಯಕ್ಕೆ ಹೋಗಿ ಬರುವ ನೆಪದಲ್ಲಿ ಮಗುವನ್ನು ಕಿಟಿಕಿಯಿಂದ ಎಸೆದು‌ ಹೋಗಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

A thrilling twist to child theft
A thrilling twist to child theft

By

Published : Jun 16, 2022, 2:18 PM IST

Updated : Jun 16, 2022, 3:12 PM IST

ಹುಬ್ಬಳ್ಳಿ:ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಕಿಮ್ಸ್‌ನಲ್ಲಿ ಮಗುವಿನ ಕಳ್ಳತನವೇ ನಡೆದಿಲ್ಲ ಎಂಬುದು ತನಿಖೆಯಿಂದ ಬಯಲಾಗಿದೆ. ಹೌದು, ಕಳೆದ ಸೋಮವಾರ ಯಾರೋ ಮಗುವನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ತಾಯಿ ಸಲ್ಮಾ ಶೇಖ್ ಠಾಣೆಗೆ ದೂರು ನೀಡಿದ್ದರು. ಆದರೆ, ಮಂಗಳವಾರ ಮುಂಜಾನೆ ಕಿಮ್ಸ್ ಹಿಂಭಾಗದಲ್ಲಿ ಪತ್ತೆಯಾಗಿತ್ತು. ಇದೀಗ ಪೊಲೀಸ್ ತನಿಖೆಯಲ್ಲಿ ಮಗು ಕಳ್ಳತನದ ಅಸಲಿಯತ್ತು ಬಯಲಾಗಿದ್ದು, ಅನಾರೋಗ್ಯ ಹೊಂದಿದ್ದ ಮಗುವನ್ನು ತಾಯಿಯೇ ಎಸೆದಿದ್ದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಹುಬ್ಬಳ್ಳಿ: ಕಳ್ಳತನವಾದ ಮಗು ಕಿಮ್ಸ್‌ ಹಿಂಭಾಗದಲ್ಲಿ ಪತ್ತೆ, ಪೋಷಕರ ನಿಟ್ಟುಸಿರು

ಶೌಚಾಲಯಕ್ಕೆ ಬರುವ ನೆಪದಲ್ಲಿ ಮಗುವನ್ನು ತಂದು ಅಲ್ಲಿಯೇ ಎಸೆದು ಡ್ರಾಮಾ ಮಾಡಿದ್ದರು. ಆದರೆ, ಈ ವಿಲನ್ ತಾಯಿಯು ಮಾಡಿದ್ದ ನಾಟಕವನ್ನು ಅವಳಿನಗರದ ಪೊಲೀಸರು ಇದೀಗ ಬಯಲು ಮಾಡಿದ್ದಾರೆ. ಕಿಮ್ಸ್ ಸಿಸಿಟಿವಿಯಲ್ಲಿ ತಾಯಿ ಸಲ್ಮಾ ಮಗು ಎಸದಿರುವುದು ಬೆಳಕಿಗೆ‌ ಬಂದಿದೆ.

ಹುಬ್ಬಳ್ಳಿ ಮಗು ಕಳ್ಳತನ ಪ್ರಕರಣ

ತನಗೆ ಹುಟ್ಟಿದ ಮಗುವಿನ ತಲೆ ಅತಿಯಾಗಿ ದೊಡ್ಡದಿದ್ದು, ಅದನ್ನು ತಾನೇ 103 ವಾರ್ಡಿನ ಶೌಚಾಲಯದ ಪಕ್ಕದ ಕಿಟಕಿಯಿಂದ ಹೊರಗೆ ಒಗೆದಿದ್ದಾರೆ. ಅದೃಷ್ಟವಶಾತ್ ಮಗು ಹುಲ್ಲಿನ ಮೇಲೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದೆ. ತನ್ನದೇ ಕರುಳು ಬಳ್ಳಿಯನ್ನು ಕೊಲೆ ಮಾಡಲು ಯತ್ನಿಸಿದರಾ ಎಂಬ ಅನುಮಾನ ಈಗ ಸೃಷ್ಟಿಯಾಗಿದೆ.

ಒಟ್ಟಿನಲ್ಲಿ ದೊಡ್ಡದೊಂದು ಡ್ರಾಮಾ ಮಾಡಿರುವ ತಾಯಿಯ ಅಸಲಿಯತ್ತು ಬಯಲಾಗಿದ್ದು, ತಾನೇ ಹೆತ್ತ ಮಗವಿಗೆ ತಾನೇ ವಿಲನ್ ಆಗಿರುವ ಘಟನೆಯಿಂದ ಜನ ಬೆಚ್ಚಿಬಿದ್ದಿದ್ದಾರೆ. ಜೀವ ಕೊಟ್ಟವಳೇ ಜೀವ ತೆಗೆಯಲು ಮುಂದಾಗಿರುವುದು ನಿಜಕ್ಕೂ ಅಮಾನವೀಯ ಕೃತ್ಯಕ್ಕೆ ಸಾಕ್ಷಿಯಾಗಿದೆ. ಸದ್ಯ ಪೋಷಕರ ಹೇಳಿಕೆ ಮೇರೆಗೆ ಪೊಲೀಸರು ತಾಯಿ ಹಾಗೂ ಮಗುವಿನ ಚಿಕಿತ್ಸೆಗೆ ಕಿಮ್ಸ್​ನಲ್ಲಿ ಅನುವು ಮಾಡಿಕೊಡಲಾಗಿದೆ.

ಇದನ್ನೂ ಓದಿ:ಹುಬ್ಬಳ್ಳಿ: ಹಾಡಹಗಲೇ ಕೈಯಲ್ಲಿದ್ದ ಮಗು ಹೊತ್ತೊಯ್ದ ಖದೀಮರು

Last Updated : Jun 16, 2022, 3:12 PM IST

ABOUT THE AUTHOR

...view details