ಹುಬ್ಬಳ್ಳಿ: ಕಳ್ಳತನ ಮಾಡಲು ಹೋದ ಖದೀಮನೋರ್ವ ಅಪಾರ್ಟ್ಮೆಂಟ್ ಮೇಲಿಂದ ಬಿದ್ದಿರುವ ಘಟನೆ ವಿದ್ಯಾನಗರದ ಚೆನ್ನಮ್ಮ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಕಳ್ಳತನ ಮಾಡಲು ಹೋಗಿ ಅಪಾರ್ಟ್ಮೆಂಟ್ ಮೇಲಿಂದ ಕೆಳಗೆ ಬಿದ್ದ ಖದೀಮ! - ವಿದ್ಯಾನಗರದ ಚನ್ನಮ್ಮ ಅಪಾರ್ಟ್ಮೆಂಟ್
ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಲು ಹೋದ ವ್ಯಕ್ತಿ ಆಯ ತಪ್ಪಿ ಅಪಾರ್ಟ್ಮೆಂಟ್ ಮೇಲಿಂದ ಕೆಳಗೆ ಬಿದ್ದ ಘಟನೆ ನಡೆದಿದೆ.

ಅಪಾರ್ಟ್ಮೆಂಟ್ನಿಂದ ಕೆಳಗೆ ಬಿದ್ದ ಖದೀಮ
ತಾರಿಹಾಳ ಗ್ರಾಮದ ಪುಟ್ಟರಾಜ ಎಂಬಾತ ಅಪಾರ್ಟ್ಮೆಂಟ್ ಮೇಲಿಂದ ಬಿದ್ದ ಕಳ್ಳ. ಆಗಸ್ಟ್ 30ರಂದು ತಡರಾತ್ರಿ ಕಂಠಪೂರ್ತಿ ಕುಡಿದು ಕಳ್ಳತನ ಮಾಡಲು ವಿದ್ಯಾನಗರದ ಚೆನ್ನಮ್ಮ ಅಪಾರ್ಟ್ಮೆಂಟ್ಗೆ ಹೋಗಿದ್ದಾನೆ. ಈ ವೇಳೆ ಆಯ ತಪ್ಪಿ ಬಿದ್ದು ಗಾಯಗಳಾಗಿವೆ. ಬಳಿಕ ತೀವ್ರವಾಗಿ ಗಾಯಗೊಂಡ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.