ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ: ಧಾರವಾಡದಲ್ಲಿ ಮನೆ - ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿರೋ ವೈದ್ಯರ ತಂಡ

ಲಾಕ್​ಡೌನ್​ ಆದೇಶ ಹಾಗೂ ಕೊರೊನಾ ಭೀತಿ ಹಿನ್ನೆಲೆ ಸಣ್ಣ ಪುಟ್ಟ ಖಾಯಿಲೆ ಕಾರಣ ಜನ ಮನೆಯಿಂದ ಹೊರಗೆ ಹೆಜ್ಜೆಯಿಡುತ್ತಿಲ್ಲ. ಹಾಗಾಗಿ ಚಿರಾಯು ಹೆಲ್ತ್ ಆ್ಯಂಡ್ ಅವೇರ್​​​ನೆಸ್​​ ಟೀಮ್ ವತಿಯಿಂದ ಹರೀಶ ಮೆಡಿ ಲ್ಯಾಬ್​ನ ವೈದ್ಯರು ಜಿಲ್ಲೆಯ ಯಾವುದೇ ಮೂಲೆಯಿಂದ ಕರೆ ಬಂದಲ್ಲಿ ಅವರ ವಿಳಾಸ ಪಡೆದುಕೊಂಡು ಅವರ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ.

A team of doctors going to every home for treatment in Dharwad
ಕೊರೊನಾ ಭೀತಿ: ಧಾರವಾಡದಲ್ಲಿ ಮನೆ-ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ

By

Published : Apr 11, 2020, 1:36 PM IST

ಧಾರವಾಡ:ಸಣ್ಣಪುಟ್ಟ ರೋಗಗಳಿಗೆ ವೈದ್ಯರ ಬಳಿ ಹೋಗುವುದಕ್ಕೆ ಜನ ಹಿಂದೇಟು ಹಾಕುವುದನ್ನು ಮನಗಂಡ ವೈದ್ಯರ ತಂಡವೊಂದು ಸ್ವತಃ ತಾವೇ ಮನೆ-ಮನೆಗೆ ಹೋಗಿ ಮಧುಮೇಹ, ಸಕ್ಕರೆ ಖಾಯಿಲೆ, ರಕ್ತದೊತ್ತಡ ಸೇರಿದಂತೆ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಮನೆ-ಮನೆಗೆ ತೆರಳಿ ಚಿಕಿತ್ಸೆ

ಕೊರೊನಾ ನಿಯಂತ್ರಣಕ್ಕೆ ಲಾಕ್​ಡೌನ್​ ಆದೇಶ ಹೊರಡಿಸಿದ ಹಿನ್ನೆಲೆ ಜನರು ಮನೆ ಬಿಟ್ಟು ಹೊರಗೆ ಬರುವುದಕ್ಕೆ ಹೆದರುವಂತಾಗಿದ್ದು, ಸದ್ಯ ಜಿಲ್ಲೆಯ ಆರು ಜನ ವೈದ್ಯರ ತಂಡ ಸೇರಿಕೊಂಡು ಈ ಕೆಲಸ ಮಾಡುತ್ತಿದೆ.

ಚಿರಾಯು ಹೆಲ್ತ್ ಆ್ಯಂಡ್ ಅವೇರ್​ನೆಸ್ ಟೀಮ್​ನಿಂದ ಹರೀಶ ಮೆಡಿ ಲ್ಯಾಬ್​ನ ವೈದ್ಯರು ಜಿಲ್ಲೆಯ ಯಾವುದೇ ಮೂಲೆಯಿಂದ ಕರೆ ಬಂದಲ್ಲಿ ಅವರ ವಿಳಾಸ ಪಡೆದುಕೊಂಡು ಅವರ ಮನೆಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೊರೊನಾ ವಿರುದ್ಧ ಹೋರಾಡುತ್ತಿರುವ ಪೊಲೀಸರು, ಚೆಕ್ ಪೋಸ್ಟ್ ಸಿಬ್ಬಂದಿ, ಪೌರ ಕಾರ್ಮಿಕರಿಗೂ ಸಹ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಮಧುಮೇಹ ಪರೀಕ್ಷೆ ನಡೆಸುತ್ತಿದ್ದಾರೆ.

ABOUT THE AUTHOR

...view details