ಕರ್ನಾಟಕ

karnataka

ETV Bharat / state

ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದ್ದಕ್ಕೆ ಅಧಿಕಾರಿಗಳ ಜೊತೆ ಜಗಳಕ್ಕೆ ನಿಂತ ವ್ಯಕ್ತಿ - Covid-19 latest news

ಮಾಸ್ಕ್​​ ಇಲ್ಲದೆ ಚಿಕ್ಕ ಮಕ್ಕಳನ್ನು ಸಹ ಬೈಕ್ ಮೇಲೆ ವ್ಯಕ್ತಿಯೊಬ್ಬರು ಕರೆದುಕೊಂಡು ಬಂದಿದ್ದರು. ವ್ಯಕ್ತಿಯನ್ನು ತಡೆದು ನಿಲ್ಲಿಸಿದ ಅಧಿಕಾರಿಗಳೊಂದಿಗೆ ಏಕಾಏಕಿ ವಾಗ್ವಾದ ನಡೆಸಿದ್ದಾನೆ.

A person altercation with authorities for Put it on mask
ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದಕ್ಕೆ ಅಧಿಕಾರಿಗಳ ಜೊತೆ ಜಗಳಕ್ಕೆ ನಿಂತ ವ್ಯಕ್ತಿ

By

Published : Oct 1, 2020, 2:14 PM IST

Updated : Oct 1, 2020, 2:26 PM IST

ಧಾರವಾಡ: ಮಾಸ್ಕ್ ಹಾಕದೆ ರಸ್ತೆಗಿಳಿದ ಜನರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಲು ಮುಂದಾದ ಅಧಿಕಾರಿಗಳೊಂದಿಗೆ ವ್ಯಕ್ತಿಯೋರ್ವ ವಾಗ್ವಾದ ನಡೆಸಿದ ಘಟನೆ ನಗರದದಲ್ಲಿ ನಡೆದಿದೆ.

ನಗರದ ವಿವೇಕಾನಂದ ವೃತ್ತದಲ್ಲಿ ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಮಾಸ್ಕ್ ಹಾಕದೆ ಸುತ್ತಾಟ ಹಾಗೂ ಸಂಚಾರ ನಡೆಸುತ್ತಿದ್ದ ಸಾರ್ವಜನಿಕರಿಗೆ ದಂಡ ವಿಧಿಸಲು ಮುಂದಾದಾಗ ವ್ಯಕ್ತಿಯೋರ್ವ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಜಗಳಕ್ಕಿಳಿದಿದ್ದಾನೆ.

ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದ್ದಕ್ಕೆ ಅಧಿಕಾರಿಗಳ ಜೊತೆ ಜಗಳಕ್ಕೆ ನಿಂತ ವ್ಯಕ್ತಿ

ಸ್ವಲ್ಪ ಸಮಯ ವ್ಯಕ್ತಿ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತಾದರೂ ನಂತರ ಪೊಲೀಸರು ವ್ಯಕ್ತಿಯನ್ನು ಸಮಾಧಾನ ಮಾಡಿ ಕಳುಹಿಸಿದರು. ಮಾಸ್ಕ್​​ ಹಾಕಿಕೊಳ್ಳಿ ಎಂದು ಎಚ್ಚರಿಕೆ ನೀಡಿದ ಅಧಿಕಾರಿಗಳೊಂದಿಗೆ ವ್ಯಕ್ತಿ ಜಗಳ ಮಾಡಿಕೊಂಡಿದ್ದಾನೆ.

ಮಾಸ್ಕ್​​ ಇಲ್ಲದೆ ಚಿಕ್ಕ ಮಕ್ಕಳನ್ನು ಸಹ ಬೈಕ್ ಮೇಲೆ ವ್ಯಕ್ತಿ ಕರೆದುಕೊಂಡು ಬಂದಿದ್ದ. ವ್ಯಕ್ತಿಯನ್ನು ತಡೆದು ನಿಲ್ಲಿಸಿದ ಅಧಿಕಾರಿಗಳೊಂದಿಗೆ ಏಕಾಏಕಿ ವಾಗ್ವಾದ ನಡೆಸಿದ್ದಾನೆ. ಮಾಸ್ಕ್​​ ಧರಿಸುವ ಕುರಿತು ಜಾಗೃತಿ ಮೂಡಿಸುತ್ತಿರುವ ಅಧಿಕಾರಿಗಳಿಗೆ ಆವಾಜ್ ಹಾಕಿ ದಂಡ ಸಹ ಕಟ್ಟದೆ ವ್ಯಕ್ತಿ ಉದ್ಧಟತನ ತೋರಿದ್ದಾನೆ ಎನ್ನಲಾಗಿದೆ.

Last Updated : Oct 1, 2020, 2:26 PM IST

For All Latest Updates

ABOUT THE AUTHOR

...view details