ಕರ್ನಾಟಕ

karnataka

ETV Bharat / state

ಪ್ರಿಯಕರನೊಂದಿಗೆ ಸೇರಿ ಮಗನನ್ನೇ ಕೊಂದ ತಾಯಿ: ಒಂದೇ ದಿನದಲ್ಲಿ ಮೂವರು ಆರೋಪಿಗಳು ಅರೆಸ್ಟ್​ - ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್

ಹನುಮಂತಗೌಡ ಸೋಮನಗೌಡ ಪಾಟೀಲ್ ಎಂಬ ವ್ಯಕ್ತಿಯು ಕೊಲೆಯಾಗಿದ್ದು, ಕಣ್ಣಿಗೆ ಖಾರದ ಪುಡಿ ಎರಚಿ ಎರಡು ಕಾಲು ಕಟ್ಟಿ ಹೊಡೆದು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

A mother killed her son in dharawad
ಮೂವರು ಆರೋಪಿಗಳ ಬಂಧನ

By

Published : Jun 26, 2020, 3:38 PM IST

ಧಾರವಾಡ: ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪ್ರಿಯಕರನೊಂದಿಗೆ ಸೇರಿ ಮಗನನ್ನೇ ಹೆತ್ತ ತಾಯಿ ಕೊಲೆ ಮಾಡಿರುವ ಘಟನೆ ತಾಲೂಕಿನ ನುಗ್ಗಿಕೇರಿ ಗ್ರಾಮದಲ್ಲಿ ನಡೆದಿದೆ.

ಕೊಲೆಯ ಆರೋಪಿಗಳಾದ ಭೀಮನಗೌಡ ಪಾಟೀಲ್ (24), ಮೃತನ ತಾಯಿ‌ ಸುನಂದಾ ಸೋಮನಗೌಡ ಪಾಟೀಲ್ (45) ಹಾಗೂ ಮಹಾದೇವಪ್ಪ ಗಾಯಕವಾಡ (50) ಎಂಬುವರನ್ನು ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್

ಗುರುವಾರ ಹನುಮಂತಗೌಡನ ಕಣ್ಣಿಗೆ ಖಾರದ ಪುಡಿ ಎರಚಿ ಎರಡು ಕಾಲು ಕಟ್ಟಿ ಹೊಡೆದು ಕೊಲೆ ಮಾಡಲಾಗಿತ್ತು. ಈತನ ತಾಯಿ ಹಾಗೂ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ ವ್ಯಕ್ತಿ ಸೇರಿದಂತೆ ಮೂವರು ಕೊಲೆಯ ಮಾಡಿದ್ದರು. ಕೊಲೆ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details