ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ಚೂರಿ ಇರಿದ ಘಟನೆ ವಿದ್ಯಾನಗರದ ಲೋಕಪ್ಪನ ಹಕ್ಕಲದ ವಿಘ್ನೇಶ್ವರ ಶಾಲೆ ಮೈದಾನದ ಬಳಿ ನಡೆದಿದೆ.
ಹುಬ್ಬಳ್ಳಿ: ಯುವಕನಿಗೆ ಚಾಕು ಇರಿತ.. ಬೆನ್ನಿಗೆ ಗಂಭೀರ ಗಾಯ! - Knife stab for trivial reason
ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ಚೂರಿ ಇರಿದ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಲೋಕಪ್ಪನ ಹಕ್ಕಲದ ವಿಘ್ನೇಶ್ವರ ಶಾಲೆ ಮೈದಾನದ ಬಳಿ ನಡೆದಿದೆ.
![ಹುಬ್ಬಳ್ಳಿ: ಯುವಕನಿಗೆ ಚಾಕು ಇರಿತ.. ಬೆನ್ನಿಗೆ ಗಂಭೀರ ಗಾಯ! ಚಾಕು ಇರಿತ](https://etvbharatimages.akamaized.net/etvbharat/prod-images/768-512-9528178-thumbnail-3x2-dgjh.jpg)
ಚಾಕು ಇರಿತ
ಚಾಕು ಇರಿತ ಕುರಿತು ಮಾತನಾಡಿದ ಸಂಬಂಧಿಕರು
ವಿಜಯ ಪರಶುರಾಮ ಬಾಗನ್ನವರ (24) ಚಾಕು ಇರಿತಕ್ಕೊಳಗಾದ ಯುವಕ. ಹೆಗ್ಗೇರಿಯ ಸಲೀಂ ಆರೋಪಿ. ಆರು ತಿಂಗಳ ಹಿಂದೆ ತನ್ನ ಹೆಂಡತಿಯ ಕೈ ಹಿಡಿದು ಎಳೆದಿದ್ದ ಎಂದು ಜಗಳ ತೆಗೆದ ಸಲೀಂ ಚಾಕುವಿನಿಂದ ಎದುರಿಗೆ ಸಿಕ್ಕ ವಿಜಯನ ಬೆನ್ನಿಗೆ ಇರಿದು ಪರಾರರಿಯಾಗಿದ್ದಾನೆ. ಇನ್ನೂ ಗಾಯಗೊಂಡ ವಿಜಯ್ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.