ಹುಬ್ಬಳ್ಳಿ:ಮೊಬೈಲ್ಗೆ ಬಂದ ಲಿಂಕ್ ಓಪನ್ ಮಾಡಿರುವ ನಗರದ ವಿಶ್ವಾಸ್ ಹುಕ್ಕೇರಿ ಎಂಬುವರು 39,974 ರೂ ಹಣ ಕಳೆದುಕೊಂಡಿದ್ದಾರೆ.
ಹುಬ್ಬಳ್ಳಿ: ಮೊಬೈಲ್ಗೆ ಬಂದ ಲಿಂಕ್ ಕ್ಲಿಕ್ಕಿಸಿ ಸಾವಿರಾರು ರೂಪಾಯಿ ಕಳೆದುಕೊಂಡ ವ್ಯಕ್ತಿ
ಮೊಬೈಲ್ಗೆ ಬಂದ ಲಿಂಕ್ ತೆರೆದು ಬ್ಯಾಂಕ್ ಖಾತೆ ವಿವರ ತುಂಬಿದ ವ್ಯಕ್ತಿ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಬ್ಯಾಂಕ್ ಹೆಸರಲ್ಲಿ ಲಿಂಕ್ ಕಳುಹಿಸಿದ್ದ ಕಳ್ಳರು ಖಾತೆಯಲ್ಲಿದ್ದ ಹಣ ಎಗರಿಸಿದ್ದಾರೆ.
ಮೊಬೈಲ್ಗೆ ಬಂದ ಲಿಂಕ್ ಒತ್ತಿ ಸಾವಿರಾರು ರೂಪಾಯಿ ಕಳೆದುಕೊಂಡ ವ್ಯಕ್ತಿ
ಇವರ ಮೊಬೈಲ್ಗೆ ಎಸ್‌ಬಿಐ ಬ್ಯಾಂಕ್ ಹೆಸರಲ್ಲಿ ಲಿಂಕ್ ಮೂಲಕ ಕೆವೈಸಿ ಮಾಡಿಸಿಕೊಳ್ಳುವಂತೆ ಸಂದೇಶ ಬಂದಿತ್ತು. ಈ ಸಂದೇಶವನ್ನು ನಂಬಿರುವ ಅವರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಿದ್ದಾರೆ. ನಂತರ ಮೊಬೈಲ್ಗೆ ಒಟಿಪಿ ಬಂದಿದೆ. ಅದನ್ನೂ ದಾಖಲಿಸಿದ್ದಾರೆ. ಆದರೆ ಒಟಿಪಿ ನೀಡುತ್ತಲೇ ಹಂತ ಹಂತವಾಗಿ ಖಾತೆಯಿಂದ 39,974 ರೂ. ಕಳೆದುಕೊಂಡಿದ್ದಾರೆ. ಈ ಕುರಿತು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಬೈಕ್ ಮೇಲೆ ಹರಿದ ಲಾರಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು