ಹುಬ್ಬಳ್ಳಿ:ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಆಸ್ತಿ ಜಗಳದಲ್ಲಿ ಮಾವನನ್ನೇ ಅಳಿಯಂದಿರು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾದ ಘಟನೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ನಡೆದಿದೆ. ಶಿವಪ್ಪ ಅಡಿವೆಪ್ಪ ಮಳ್ಳೊಳ್ಳಿ (56) ಸಾವಿಗೀಡಾದ ವ್ಯಕ್ತಿ. ಶಿವಪ್ಪ ಮತ್ತು ಅಳಿಯಂದಿರಾದ ಗುರಪ್ಪ, ಷಣ್ಮುಕಪ್ಪಾ, ಗಂಗಪ್ಪಾ ಹಾಗೂ ಸಿದ್ರಾಮಪ್ಪರ ನಡುವೆ ಆಸ್ತಿಗಾಗಿ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ದೇವಸ್ಥಾನದ ಮುಂದೆಯೇ ಮಾವನ ಕೊಲೆ: ಗ್ರಾಮದಲ್ಲಿನ ಕಲ್ಮೇಶ್ವರ ದೇವಸ್ಥಾನದ ಮುಂದೆ ಶಿವಪ್ಪನ ಅಳಿಯಂದಿರು ಜಗಳ ತೆಗೆದಿದ್ದಾರೆ. ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ಅಳಿಯಂದಿರು ತಾವು ತಂದಿದ್ದ ಮಾರಕಾಸ್ತ್ರಗಳಿಂದ ಶಿವಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಮೂಲಗಳಿಂದ ತಿಳಿದುಬಂದಿದೆ.