ಕರ್ನಾಟಕ

karnataka

ETV Bharat / state

ಯಲ್ಲಾಪುರ ಬಳಿ ರಸ್ತೆ ಅಪಘಾತ: ಹವ್ಯಾಸಿ ಛಾಯಾಗ್ರಾಹಕ ಸಾವು - ಧಾರವಾಡ ಕ್ರೈಮ್​ ಸುದ್ದಿ

ಲಾರಿ ಹಾಗೂ ಬೈಕ್ ನಡುವೆ ಅಪಘಾತದಲ್ಲಿ ಧಾರವಾಡದ ಜಯನಗರದ ಕಿರಣ (35) ಎಂಬ ಹವ್ಯಾಸಿ ಛಾಯಾಗ್ರಾಹಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

a-man-death-in-road-accident-in-dharwad
ಹವ್ಯಾಸಿ ಛಾಯಾಗ್ರಾಹಕ

By

Published : Jun 15, 2020, 8:13 AM IST

Updated : Jun 15, 2020, 9:18 AM IST

ಧಾರವಾಡ: ಬೈಕ್ ಖರೀದಿಸಲು ಹೋದ ಹವ್ಯಾಸಿ ಛಾಯಾಗ್ರಾಹಕ ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಯಲ್ಲಾಪುರ ಬಳಿ ಸಂಭವಿಸಿದೆ.

ಲಾರಿ ಹಾಗೂ ಬೈಕ್ ನಡುವೆ ಅಪಘಾತದಲ್ಲಿ ಧಾರವಾಡದ ಜಯನಗರದ ಕಿರಣ (35) ಎನ್ನುವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಯುವಕ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಸಾವಿಗೀಡಾದ ಕಿರಣ್

ಓದಿ: ಧಾರವಾಡ: ನಟ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಕಲಾವಿದನ ಸಂತಾಪ

ಮೃತ ಕಿರಣ ಹವ್ಯಾಸಿ ಛಾಯಾಗ್ರಾಹಕನಾದ್ದರು. ಲಾರಿ ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಲಾರಿಗಳ ನಡುವೆ ಅಪಘಾತ

ಜಿಲ್ಲೆಯ ಮತ್ತೊಂದೆಡೆ ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿದ್ದು, ಲಾರಿ ಚಾಲಕರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ 108 ಆ್ಯಂಬುಲೆನ್ಸ್​ ಸಿಬ್ಬಂದಿಯು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

Last Updated : Jun 15, 2020, 9:18 AM IST

ABOUT THE AUTHOR

...view details