ಹುಬ್ಬಳ್ಳಿ: ವ್ಯಕ್ತಿಯೋರ್ವ ಸಾರ್ವಜನಿಕ ಸ್ಥಳದಲ್ಲಿ ಅರೆನಗ್ನನಾಗಿ ಯುವತಿಯರ ಮುಂದೆ ಅಸಭ್ಯವಾಗಿ ವರ್ತಿಸಿದ ಘಟನೆ ನಗರದಲ್ಲಿ ನಡೆದಿದೆ.
ಹುಬ್ಬಳ್ಳಿ: ಸಾರ್ವಜನಿಕ ಸ್ಥಳದಲ್ಲಿ ಅರೆನಗ್ನನಾಗಿ ದುರ್ವರ್ತನೆ, ಆರೋಪಿ ವಿರುದ್ಧ ಪ್ರಕರಣ - ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸ್ಥಳದಲ್ಲೇ ವ್ಯಕ್ತಿಯಿಂದ ಅಸಭ್ಯ ವರ್ತನೆ
ರವಿವಾರ ರಾತ್ರಿ ಇಲ್ಲಿನ ನವನಗರದ ಕ್ಯಾನ್ಸರ್ ಆಸ್ಪತ್ರೆಯ ಎದುರಿನ ಬಸ್ ನಿಲ್ದಾಣದ ಬಳಿ, ವ್ಯಕ್ತಿಯೊಬ್ಬ ಬೈಕ್ ಮೇಲೆ ಕುಳಿತುಕೊಂಡು ಅರೆನಗ್ನನಾಗಿ, ಅಸಭ್ಯವಾಗಿ ವರ್ತಿಸಿದ್ದಾನೆ. ಈತನ ದುರ್ವರ್ತನೆಗೆ ಯುವತಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲೇ ವ್ಯಕ್ತಿಯಿಂದ ಅಸಭ್ಯ ವರ್ತನೆ
ಶಾಂತನಗರದ ನಿವಾಸಿ ಬಸವರಾಜ ದೇವರಗುಡಿ ದುರ್ವರ್ತನೆ ತೋರಿದ ಆರೋಪಿ. ಈತ ರವಿವಾರ ರಾತ್ರಿ ಇಲ್ಲಿನ ನವನಗರದ ಕ್ಯಾನ್ಸರ್ ಆಸ್ಪತ್ರೆಯ ಎದುರಿನ ಬಸ್ ನಿಲ್ದಾಣದ ಬಳಿ, ಬೈಕ್ ಮೇಲೆ ಕುಳಿತುಕೊಂಡು ಅರೆನಗ್ನನಾಗಿ, ಅಸಭ್ಯವಾಗಿ ವರ್ತಿಸಿದ್ದಾನೆ.
ಈ ಬಗ್ಗೆ ನವನಗರ ಪೊಲೀಸ್ ಠಾಣೆಗೆ ಯುವತಿಯರು ದೂರು ನೀಡಿದ್ದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವ್ಯಕ್ತಿಗೆ ಲಾಠಿಯೇಟು ಕೊಟ್ಟು, ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಅಸಭ್ಯ ವರ್ತನೆಯನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಪೊಲೀಸರಿಗೆ ನೀಡಿದ್ದಾರೆ.