ಹುಬ್ಬಳ್ಳಿ: ಕೌಟುಂಬಿಕ ಜಗಳದ ಕುರಿತ ವಿಚಾರಣೆಗೆಂದು ಠಾಣೆಗೆ ಬಂದ ವ್ಯಕ್ತಿಯೊಬ್ಬ, ಅಲ್ಲಿದ್ದ ಎಎಸ್‌ಐ ಕೊರಳು ಪಟ್ಟಿ ಹಿಡಿದು ಅವಾಚ್ಯ ಪದಗಳಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಆತನ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿಯಲ್ಲಿ ASI ಕೊರಳ ಪಟ್ಟಿ ಹಿಡಿದ ಆರೋಪಿ ವಿರುದ್ಧ ಕೇಸ್ - ನವನಗರ ಎಎಸ್‌ಐ ಕೊರಳ ಪಟ್ಟಿ ಹಿಡಿದ ವ್ಯಕ್ತಿ
ವಿಚಾರಣೆಗೆಂದು ಠಾಣೆಗೆ ಕರೆತಂದಿದ್ದ ವ್ಯಕ್ತಿಯೊಬ್ಬ ಎಎಸ್‌ಐ ಕೊರಳ ಪಟ್ಟಿ ಹಿಡಿದು ಅವಾಚ್ಯ ಶಬ್ಧಗಳಿಂದ ನಿಂದಿಸಿ ದೂಡಾಡಿದ ಆರೋಪ ಪ್ರಕರಣ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ನವನಗರ ಪೊಲೀಸ್ ಠಾಣೆ
ನವನಗರದ ನಿವಾಸಿ ಆನಂದ ಭಂಗಿ ವಿರುದ್ಧ ಎಎಸ್‌ಐ ರುದ್ರಗೌಡ ಸುಧಿ ದೂರು ನೀಡಿದ್ದಾರೆ. ಗಂಡ-ಹೆಂಡತಿ ಜಗಳದ ಕುರಿತು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆಂದು ಆನಂದನನ್ನು ಠಾಣೆಗೆ ಕರೆಸಲಾಗಿತ್ತು.
ವಿಚಾರಣಾ ಹಂತದಲ್ಲಿ ಕೋಪಗೊಂಡ ಆರೋಪಿಯು, ರುದ್ರಗೌಡ ಅವರ ಕೊರಳ ಪಟ್ಟಿ ಹಿಡಿದು ದೂಡಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಅಲ್ಲದೆ, ಅವಾಚ್ಯವಾಗಿ ಬೈದು ನಿಂದಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.