ಧಾರವಾಡ:ಮದ್ಯದ ಅಮಲಿನಲ್ಲಿ ಪತಿಯೋರ್ವ ಪತ್ನಿಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡದ ಕೋಳಿಕೇರಿಯಲ್ಲಿ ನಡೆದಿದೆ. ಮಂಜವ್ವ ಪಠಾತ್ (42) ಎಂಬ ಮಹಿಳೆ ಹತ್ಯೆಗೀಡಾದವರು. ಪತಿ ಗದಿಗೆಪ್ಪ ಪಠಾತ್ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಗದಿಗೆಪ್ಪ ಮದ್ಯವ್ಯಸನಿಯಾಗಿದ್ದು, ಗುರುವಾರ ಮದ್ಯ ಕುಡಿದು ಬಂದು ಹೊಲದಲ್ಲಿ ಮೂಲಂಗಿ ತೊಳೆಯುತ್ತ ಕುಳಿತಿದ್ದ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿದ ನಂತರ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.