ಕರ್ನಾಟಕ

karnataka

ETV Bharat / state

ನಿವೃತ್ತಿ ಬಳಿಕ 42 ಕಿ.ಮೀ ಓಡಿ ಹುಟ್ಟಿದ ಊರು ತಲುಪಿದ ಸೈನಿಕ.. ಯುವಕರಿಗೆ ಸ್ಫೂರ್ತಿ!! - grand welcome to warrior

ನನ್ನ ತಾಲೂಕಿನ ಒಂದೊಂದು ಮನೆಯಿಂದ ಓರ್ವ ವೀರ ಯೋಧ ದೇಶ ಸೇವೆಯಲ್ಲಿ ತೊಡಗುವಂತಾಗಬೇಕು ಎಂಬುದು ನನ್ನ ಹೆಬ್ಬಯಕೆ. ಗ್ರಾಮೀಣ ಯುವ ಪೀಳಿಗೆಯಲ್ಲಿ ಸ್ಫೂರ್ತಿ ತುಂಬುವ ಸಲುವಾಗಿ ಈ ರೀತಿ ಹೊಸ ಹೆಜ್ಜೆ ಹಾಕಿರುವೆ..

A grand welcome from the villagers to the warrior who went to his hometown
ರನ್ನಿಂಗ್ ಮಾಡುತ್ತ ಹುಟ್ಟೂರಿಗೆ ತೆರಳಿದ ಯೋಧ

By

Published : Oct 6, 2020, 4:37 PM IST

Updated : Oct 6, 2020, 5:25 PM IST

ಹುಬ್ಬಳ್ಳಿ :ದೇಶ ಭಕ್ತಿಗೆ ಮತ್ತೊಂದು ಹೆಸರೇ ಸೈನಿಕ. ಅಂತಹ ಧೀರ ಸೈನಿಕನೋರ್ವ ನಿವೃತ್ತಿಯಾಗಿ ತಾಯ್ನಾಡಿಗೆ ಮರಳಿದ್ದಾರೆ. ಸುಮಾರು 42 ಕಿ.ಮೀ ಓಡಿ ತಮ್ಮ ಹುಟ್ಟೂರು ತಲುಪಿದ ಸೈನಿಕನನ್ನ ಗ್ರಾಮಸ್ಥರು ಭವ್ಯವಾಗಿಯೇ ಸ್ವಾಗತಿಸಿದ್ದಾರೆ.

ರನ್ನಿಂಗ್ ಮಾಡುತ್ತ ಹುಟ್ಟೂರಿಗೆ ತೆರಳಿದ ಯೋಧನಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ

ಜನ್ಮ ಭೂಮಿ ಮೇಲಿನ‌ ಪ್ರೀತಿಯಿಂದ 20 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧನೋರ್ವ ರನ್ನಿಂಗ್​ ‌ಮಾಡುತ್ತಲೇ ಸ್ವಗ್ರಾಮಕ್ಕೆ ತೆರಳಿದ್ದಾರೆ. ಕುಂದಗೋಳ ತಾಲೂಕಿನ ಚಂದ್ರಶೇಖರ್ ಬಿಚ್ಚಗತ್ತಿ ಎಂಬುವರೇ ರನ್ನಿಂಗ್ ಮಾಡುತ್ತ ಸ್ವಗ್ರಾಮಕ್ಕೆ ತೆರಳಿದ ನಿವೃತ್ತ ಯೋಧ.

ರನ್ನಿಂಗ್ ಮಾಡುತ್ತ ಹುಟ್ಟೂರಿಗೆ ತೆರಳಿದ ಯೋಧ

ಬಿಎಸ್​ಎಫ್​ನಲ್ಲಿ ಸುಮಾರು 20 ವರ್ಷಗಳ ಕಾಲ‌ ಸೇವೆ ಸಲ್ಲಿಸಿದ ಯೋಧ ಚಂದ್ರಶೇಖರ್ ಬಿಚ್ಚಗತ್ತಿ, ಹುಬ್ಬಳ್ಳಿ ರೈಲು ನಿಲ್ದಾಣದಿಂದ ಕುಂದಗೋಳ, ಶಿರೂರ, ಸಂಶಿ ಮೂಲಕ ಸುಮಾರು 42 ಕಿ.ಮೀ ಕ್ರಮಿಸಿ ತನ್ನ ಹುಟ್ಟೂರಾದ ಚಾಕಲಬ್ಬಿ ಗ್ರಾಮ ತಲುಪಿದ್ದಾರೆ.

ರನ್ನಿಂಗ್ ಮಾಡುತ್ತ ಹುಟ್ಟೂರಿಗೆ ತೆರಳಿದ ಯೋಧನಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ

ಸ್ವಗ್ರಾಮ ತಲುಪಿದ ಚಂದ್ರಶೇಖರ್ ಅವರನ್ನು ಸ್ವಾಗತಿಸಿ ಸನ್ಮಾನಿಸಿದ ಕುಂದಗೋಳದ ಶಿವಾನಂದ ಶ್ರೀ, ಇಂದಿನ ಯುವ ಪೀಳಿಗೆಗೆ ಯೋಧ ಚಂದ್ರಶೇಖರ್​ ಅವರು ಮಾದರಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುವಂತಾಗಲಿ ಎಂದು ಹರಸಿದರು.

ರನ್ನಿಂಗ್ ಮಾಡುತ್ತ ಹುಟ್ಟೂರಿಗೆ ತೆರಳಿದ ಯೋಧ

ನನ್ನ ತಾಲೂಕಿನ ಒಂದೊಂದು ಮನೆಯಿಂದ ಓರ್ವ ವೀರ ಯೋಧ ದೇಶ ಸೇವೆಯಲ್ಲಿ ತೊಡಗುವಂತಾಗಬೇಕು ಎಂಬ ಹೆಬ್ಬಯಕೆಯನ್ನು ಹೊರಹಾಕಿದ ನಿವೃತ್ತ ಯೋಧ ಚಂದ್ರಶೇಖರ್, ಗ್ರಾಮೀಣ ಯುವ ಪೀಳಿಗೆಯಲ್ಲಿ ಸ್ಫೂರ್ತಿ ತುಂಬುವ ಸಲುವಾಗಿ ತಾವು ಈ ಹೊಸ ಹೆಜ್ಜೆ ಹಾಕಿರುವುದಾಗಿ ತಿಳಿಸಿದರು. ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಸ್ವಗ್ರಾಮ ತಲುಪಲು 42 ಕಿ.ಮೀ ಕ್ರಮಿಸಿದ ನಿವೃತ್ತ ಯೋಧ ಚಂದ್ರಶೇಖರ್ ಇದೀಗ ಗ್ರಾಮಸ್ಥರ ಪ್ರಶಂಸೆಗೆ ‌ಪಾತ್ರರಾಗಿದ್ದಾರೆ.

ರನ್ನಿಂಗ್ ಮಾಡುತ್ತ ಹುಟ್ಟೂರಿಗೆ ತೆರಳಿದ ಯೋಧನಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ
Last Updated : Oct 6, 2020, 5:25 PM IST

ABOUT THE AUTHOR

...view details