ಕರ್ನಾಟಕ

karnataka

ETV Bharat / state

ಮಹದಾಯಿಗೆ ಮನಸು ಮಾಡದ ಸರ್ಕಾರ... ಮತ್ತೆ ಮುನ್ನೆಲೆಗೆ ಬಂತು ಪ್ರತ್ಯೇಕ ರಾಜ್ಯದ ಕೂಗು

ಮಹದಾಯಿ ಕಾಮಗಾರಿಗಾಗಿ ಕಳೆದ ಬಜೆಟ್​​​ನಲ್ಲಿ ರಾಜ್ಯ ಸರ್ಕಾರ 500 ಕೋಟಿ ರೂ. ಮೀಸಲಿಟ್ಟು ರೈತರ ಮೂಗಿಗೆ ತುಪ್ಪ ಸವರಿತ್ತು. ಈಗ ಕಾಮಗಾರಿ ಆರಂಭವಾಗಿಲ್ಲ ಎಂದು ಸಿಡಿದೆದ್ದಿರುವ ರೈತರು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

a-government-that-does-not-take-any-interest-in-mahadayi-farmers-prepared-for-protest
ಮಹದಾಯಿಗೆ ಮನಸು ಮಾಡದ ಸರ್ಕಾರ

By

Published : Feb 20, 2021, 5:19 PM IST

ಹುಬ್ಬಳ್ಳಿ:ಕಳೆದ 4 ದಶಕಗಳಿಂದ ಮಹದಾಯಿಗಾಗಿ ಉತ್ತರ ಕರ್ನಾಟಕ ಭಾಗದ ರೈತರು ಹೋರಾಟ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ನೀರು ಸಿಕ್ಕಿಲ್ಲ. ಕಳೆದ ವರ್ಷ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿತ್ತು.

ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ಈಗ ವರ್ಷ ಕಳೆದಿದೆ. ಆದರೆ ಇದುವರೆಗೂ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಿಲ್ಲ. ಮಹದಾಯಿ ಕಾಮಗಾರಿಗಾಗಿ ಕಳೆದ ಬಜೆಟ್​​​ನಲ್ಲಿ ರಾಜ್ಯ ಸರ್ಕಾರ 500 ಕೋಟಿ ರೂ. ಮೀಸಲಿಟ್ಟು ರೈತರ ಮೂಗಿಗೆ ತುಪ್ಪ ಸವರಿತ್ತು. ಈಗ ಕಾಮಗಾರಿ ಆರಂಭವಾಗದಿರುವುದಕ್ಕೆ ಸಿಡಿದೆದ್ದಿರುವ ರೈತರು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

ಮಹದಾಯಿ ಹೋರಾಟಗಾರರಿಂದ ಪ್ರತಿಭಟನೆಯ ಎಚ್ಚರಿಕೆ

ಈ ತಿಂಗಳಾಂತ್ಯದಲ್ಲಿ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ಮಾರ್ಚ್‌ ಮೊದಲ ವಾರದಿಂದ ಮಹದಾಯಿಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಆರಂಭಿಸುವುದಾಗಿ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸಿದ್ದು ತೇಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇನ್ನೊಂದು ಕಡೆ ವಿರೇಶ್ ಸೊಬರದಮಠ ನೇತೃತ್ವದಲ್ಲಿ ಮಹದಾಯಿ ಕಾಮಗಾರಿ ಆರಂಭಿಸುವಂತೆ ಹಾಗೂ ಸುವರ್ಣಸೌದಕ್ಕೆ ಕಚೇರಿಗಳನ್ನು ವರ್ಗಾಯಿಸುವಂತೆ ಆಗ್ರಹಿಸಿ ಬೆಂಗಳೂರು ಚಲೋ ರ್ಯಾಲಿ ರೂಪಿಸಲಾಗುತ್ತಿದೆ. ತುಮಕೂರಿನ ಸಿದ್ದಗಂಗಾ ಮಠದಿಂದ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಯುತ್ತಿದೆ.

ಮತ್ತೊಂದೆಡೆ ಸಿದ್ದು ತೇಜಿ ನೇತೃತ್ವದಲ್ಲಿ ಮಹದಾಯಿಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮೊಳಗುತ್ತಿದೆ. ಈ ಹಿಂದೆ ಸಚಿವ ಉಮೇಶ್​ ಕತ್ತಿ, ಶ್ರೀರಾಮುಲು, ನಡಹಳ್ಳಿ ತಮ್ಮ ರಾಜಕೀಯ ಲಾಭಕ್ಕಾಗಿ ಪ್ರತ್ಯೇಕ ರಾಜ್ಯದ ಹೋರಾಟ ಆರಂಭಿಸಿದ್ದರು. ಬಾಗಲಕೋಟೆಯಲ್ಲಿ ಕಚೇರಿ ತೆರೆದು ಸಭೆ ಮಾಡಿದ್ದರು ಎಂದು ಸಚಿವರ ವಿರುದ್ಧ ಕಿಡಿಕಾರಿದ್ದಾರೆ. ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ಮಂಡನೆಯಾಗಬೇಕು ಮತ್ತು ನೀರಾವರಿ ಯೋಜನೆಗಳಿಗಾಗಿ ಪ್ರತ್ಯೇಕ ರಾಜ್ಯದ ಹೋರಾಟ ಅನಿವಾರ್ಯ ಎಂದು ಹೋರಾಟದ ಕಿಡಿ ಹೊತ್ತಿಸಿದ್ದಾರೆ. ಈ ಮೂಲಕ ಮತ್ತೆ ಪ್ರತ್ಯೇಕ ರಾಜ್ಯದ ಕೂಗು ಈಗ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ:ಸಿಬ್ಬಂದಿ ಕೊರತೆ: ಆಮೆಗತಿಯಲ್ಲಿ ಸಾಗುತ್ತಿವೆ ಹು-ಧಾ ಮಹಾನಗರ ಪಾಲಿಕೆ ಕಾರ್ಯಗಳು

ABOUT THE AUTHOR

...view details