ಧಾರವಾಡ:ಜಿಲ್ಲೆಯ ರೈತ ಕುಟುಂಬವೊಂದು ತಮ್ಮ ತೋಟದಲ್ಲಿದ್ದ ಎಳನೀರನ್ನ ಕೊರೊನಾ ವೈರಸ್ ಹಬ್ಬುತ್ತಿರುವುದನ್ನು ನಿಯಂತ್ರಿಸಲು ಕೆಲಸ ಮಾಡುತ್ತಿರುವ ಪೊಲೀಸ್, ವೈದ್ಯರು ಸೇರಿದಂತೆ ಸರ್ಕಾರಿ ಸಿಬ್ಬಂದಿಗೆ ನೀಡಿದ್ದಾರೆ.
ಕೊರೊನಾ ತಡೆಗೆ ನಿರಂತರ ಸೇವೆ ಮಾಡುತ್ತಿರುವವರಿಗೆ ಎಳನೀರು ನೀಡಿದ ರೈತ ಕುಟುಂಬ - corona virus
ಸಂತೋಷ ತೊರಗಲಮಠ ಎಂಬ ರೈತನ ಕುಟುಂಬ, ಕೊರೊನಾ ವೈರಸ್ ಹಬ್ಬುತ್ತಿರುವುದನ್ನು ನಿಯಂತ್ರಿಸಲು ಕೆಲಸ ಮಾಡುತ್ತಿರುವ ಪೊಲೀಸ್, ವೈದ್ಯರು ಸೇರಿದಂತೆ ಸರ್ಕಾರಿ ಸಿಬ್ಬಂದಿಗೆ ಎಳನೀರು ನೀಡಿ ಮಾನವೀಯತೆ ಮೆರೆದಿದೆ.
ನಿರಂತರ ಸೇವೆ ಮಾಡುತ್ತಿರುವವರಿಗೆ ಎಳನೀರು ನೀಡಿದ ರೈತ ಕುಟುಂಬ
ಸಂತೋಷ ತೊರಗಲಮಠ ಎಂಬ ರೈತನ ಕುಟುಂಬ ಎಳನೀರು ನೀಡಿದೆ. ಬೆಳಗಾವಿ ಜಿಲ್ಲೆಯ ಬಿದರಗಡ್ಡಿ ಗ್ರಾಮದ ತಮ್ಮ 12 ಏಕರೆ ತೆಂಗಿನ ತೋಟದಲ್ಲಿದ್ದ ತೆಂಗಿನಕಾಯಿಗಳನ್ನು ಧಾರವಾಡಕ್ಕೆ ತಂದು ಹಂಚಿದ್ದಾರೆ.
ಜಿಲ್ಲಾ ಪೊಲೀಸರು ಜಿಲ್ಲೆಯ ಗಡಿಯಲ್ಲಿ ಪಹರೆ ಕಾಯುತ್ತಿದ್ದು, ಆ ಎಳನೀರು ಅವರಿಗೆ ಮುಟ್ಟಲೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರಗೆ ಕೂಡ ತೊರಗಲಮಠ ಕುಟುಂಬ ಎಳನೀರು ಪೂರೈಸಿದೆ.