ಹುಬ್ಬಳ್ಳಿ :ಕೋವಿಡ್‌ನಿಂದ ಕೋಟ್ಯಂತರ ಜನ ಬೀದಿಗೆ ಬಿದ್ದಿದ್ದಾರೆ. ಇಲ್ಲೊಂದು ಕುಟುಂಬ ಖಾದಿ ಬಟ್ಟೆಯ ಮಾಸ್ಕ್ ತಯಾರಿಕೆ ಮಾಡುವ ಮೂಲಕ ಸುಂದರ ಬದುಕು ಕಟ್ಟಿಕೊಂಡಿದೆ.
ವಿಜುನಗರದ ನಿವಾಸಿ ರಾಘವೇಂದ್ರ ಮುತಾಲಿಕ್ ದೇಸಾಯಿ ಎಂಬುವರು ಮಾಸ್ಕ್‌ನಿಂದ ಬದುಕು ಕಟ್ಕೊಂಡಿದ್ದಾರೆ.
ಸುಮಾರು ವರ್ಷಗಳಿಂದ ಆರ್‌ಕೆ ಖಾದಿ ಸಂಸ್ಥೆಯ ನಿರ್ದೇಶಕರಾಗಿ ಕೆಲಸ ಮಾಡಿರುವ ಇವರು, ಕೋವಿಡ್ ಕಾರಣ ಮನೆಯಲ್ಲೆ ಮಾಸ್ಕ್ ತಯಾರಿಸಿ ಜೀವನ ಕಟ್ಡಿಕೊಂಡಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿ ಕೈ ಹಿಡಿದ ಖಾದಿ ಮಾಸ್ಕ್‌ಗಳು.. ಖಾದಿ ಮಾಸ್ಕ್‌ನ ಅತ್ಯಂತ ಕನಿಷ್ಠ ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ಇವರು, ಈಗಾಗಲೇ ಸುಮಾರು 2 ಲಕ್ಷಕ್ಕೂ ಹೆಚ್ಚು ಮಾಸ್ಕ್ಗಳನ್ನು ರಾಜ್ಯ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಗೆ ಪೂರೈಸಿದ್ದಾರೆ. ಎರಡನೇ ಅಲೆ ಪರಿಣಾಮ ಬೇಡಿಕೆ ಹೆಚ್ಚಾಗುತ್ತಿದೆ.
ಖಾದಿ ತಯಾರಿಕೆಯಲ್ಲಿ ದಶಕಗಳ ಕಾಲ ಆನುಭವ ಹೊಂದಿರುವ ರಾಘವೇಂದ್ರ, ಕೊರೊನಾ ತಡೆಗಟ್ಟಲು ಖಾದಿ ಮಾಸ್ಕ್ ಅವಶ್ಯಕ ಹಾಗೂ ಆರ್ಥಿಕ ಸಂಕಷ್ಟದಿಂದ ಮಾಸ್ಕ್ ತಯಾರಿಸುವ ಕೆಲಸಕ್ಕೆ ಮುಂದಾಗುವಂತೆ ಮಾಡಿದೆ.
ಖಾದಿ ಬಟ್ಟೆಯ ಉತ್ಪನ್ನಗಳಿಗೆ ಬೇಡಿಕೆ ಸಾಕಷ್ಟು ಕುಸಿದ ಸಂದರ್ಭದಲ್ಲಿ ತಮ್ಮ ಕುಟುಂಬ ಹಾಗೂ ಇವರ ವೃತ್ತಿಯ ಮೇಲೆ ಅವಲಂಬಿತವಾಗಿರುವ 10 ಕುಟುಂಬಗಳಿಗೆ ಕೋವಿಡ್ ಸಂದರ್ಭದಲ್ಲಿ ಕೆಲಸ ನೀಡಿ ಜೀವನ ನಿರ್ವಹಣೆಗೆ ದಾರಿ ಮಾಡಿಕೊಟ್ಟಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳು ಕೂಡ ಈ ಕಾಯಕದಲ್ಲಿ ನಿರತರಾಗಿದ್ದಾರೆ.
ಇಲ್ಲಿ ನಾಲ್ಕು ಮಾದರಿಯ ಎಂಟು ಸರ್ಜಿಕಲ್ ಬಣ್ಣದ ಮಾಸ್ಕ್ಗಳನ್ನು ಸಿದ್ದಪಡಿಸಲಾಗುತ್ತಿದೆ. ಮಾಸ್ಕ್ ಆಧಾರದ ಮೇಲೆ 8 ರಿಂದ 10 ರೂ ನಿಗದಿ ಮಾಡಲಾಗಿದೆ. ಇವರು ಮಾರಾಟ ಮಾಡುವ 10 ರೂ. ಬೆಲೆ ಖಾದಿ ಮಾಸ್ಕ್ ಬೇರೆ ಬೇರೆ ಕಂಪನಿಗಳು ಅದೇ ಮಾಸ್ಕ್ ಗಳನ್ನು 35-40 ರೂ.ಗೆ ಬೆಲೆಗೆ ಮಾರುತ್ತಿವೆ. ಇವರ ಮಾಡುವ ಮಾಸ್ಕ್ಗಳನ್ನು ವೈದ್ಯರು ಸಹ ಬಳಕೆ ಮಾಡಬಹುದಾಗಿದ್ದು, ಪರಿಸರ ಸ್ನೇಹಿಯಾಗಿವೆ.
ರೈಲ್ವೆ ಇಲಾಖೆ ಕಾರ್ಮಿಕರಿಗೆ, ಪೊಲೀಸ್ ಇಲಾಖೆ ವಿವಿಧ ಸಂಘಗಳಿಗೆ ವಿತರಣೆ ಮಾಡಿದ್ದಾರೆ. ಕೊರೊನಾ ಹಿನ್ನೆಲೆ ದೇವಸ್ಥಾನಗಳಿಗೆ ಬೇಡಿಕೆಗೆ ತಕ್ಕಂತೆ ಸಾವಿರಾರು ರಾಸಾಯನಿಕ ಮಾಸ್ಕ್ ಸಿದ್ದಪಡಿಸಿ ನಿಗದಿತ ಬೆಲೆಗೆ ನೀಡಿದ್ದಾರೆ. ಖಾದಿ ಮಾಸ್ಕ್ ತಯಾರಿಸಿದ ನಂತರ ಬಟ್ಟೆ ಇಸ್ತ್ರಿ ಮಾಡಿ ಪ್ಯಾಕ್ ಮಾಡಲಾಗುತ್ತದೆ. ಮಾಸ್ಕ್ ಮೇಲೆ ಸಂಘಟನೆ ಹೆಸರು, ಚಿಹ್ನೆಗಳನ್ನು ಬರೆದು ಖಾದಿ ಮಹತ್ವ ತಿಳಿಸಿದ್ದಾರೆ.
ಕಡಿಮೆ ಹಾಗೂ ಗುಣಮಟ್ಟದ ಮಾಸ್ಕ್ಗಳನ್ನು ಖರೀದಿಗೆ ಗ್ರಾಹಕರು ಮುಗಿ ಬೀಳುತ್ತಿರುವುದು ರಾಘವೇಂದ್ರ ಕುಟುಂಬಸ್ಥರ ಮುಖದಲ್ಲಿ ಸಂತಸ ಮೂಡಿಸಿದೆ. ಈಗಾಗಲೇ ಬೆಂಗಳೂರು, ಹೈದರಾಬಾದ್, ಸೊಲ್ಲಾಪುರ ಸೇರಿದಂತೆ ವಿವಿಧ ರಾಜ್ಯದಿಂದ ಖಾದಿ ಮಾಸ್ಕ್ಗೆ ಬೇಡಿಕೆ ಬರುತ್ತಿರುವುದು ತಯಾರಕರಲ್ಲಿ ಮತ್ತಷ್ಟು ಹೆಚ್ಚು-ಹೆಚ್ಚು ಮಾಸ್ಕ್ ತಯಾರಿಸಲು ಉತ್ಸಾಹದ ಜೊತೆಗೆ ಲಾಭವಾಗುತ್ತಿದೆ.
ಕೊರೊನಾ ಹಾವಳಿ ತಪ್ಪಿಸುವ ಉದ್ದೇಶದಿಂದ ಸರ್ಕಾರ ಎಲ್ಲರಿಗೂ ಮಾಸ್ಕ್ ಕಡ್ಡಾಯ ಮಾಡಿದೆ. ಆದ್ರೇ ಸಾರ್ವಜನಿಕರು ಯಾವದೋ ಬಟ್ಟೆ ಹಾಗೂ ಅಳಿದುಳಿದ ಬಟ್ಟೆಗಳಿಂದ ಮಾಸ್ಕ್ ತಯಾರಿಸಿ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದ್ರೆ, ಎಲ್ಲಾ ರೀತಿಯಿಂದಲೂ ಸುರಕ್ಷಿತವಾಗಿರುವ ಕಡಿಮೆ ದರದಲ್ಲಿ ನಿರ್ಮಿಸಿರುವ ಖಾದಿ ಮಾಸ್ಕ್ ಬಳಸಿದರೆ ಒಳಿತು.
ಓದಿ:ಶತಾಯಗತಾಯ ಹರಸಾಹಸದ ಹೊರತಾಗಿಯೂ ಉಸಿರು ನಿಲ್ಲಿಸಿದ ಯುವತಿ ; ನೋವಿನ ಸಂತಾಪ ಹೇಳಿದ ನಟ ಸೋನು ಸೂದ್