ಧಾರವಾಡ: ಬೇಸಿಗೆ ದಿನದಲ್ಲಿ ನೀರಿನ ದಾಹ ಪ್ರಾಣಿಗಳನ್ನೂ ಬಿಟ್ಟಿಲ್ಲ. ಇದಕ್ಕೆ ಪೂರಕ ಎಂಬಂತೆ ನೀರಿನ ದಾಹ ತೀರಿಸಿಕೊಳ್ಳಲು ಕಾಗೆಯೊಂದು ನಲ್ಲಿಯಲ್ಲಿನ ನೀರು ಕುಡಿಯುತ್ತಿರುವ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.
ಬೇಸಿಗೆಯ ತಾಪಕ್ಕೆ ನೀರಿನ ದಾಹ... ನಲ್ಲಿಯಲ್ಲಿ ನೀರು ಕುಡಿದ ಕಾಗೆ! - kannadanews
ಕಾಗೆಯೊಂದು ತನ್ನ ನೀರಿನ ದಾಹ ತೀರಿಸಿಕೊಳ್ಳಲು ನಲ್ಲಿಯಲ್ಲಿನ ನೀರು ಕುಡಿಯುತ್ತಿರುವ ದೃಶ್ಯ ಧಾರವಾಡದಲ್ಲಿ ಕಂಡು ಬಂದಿದೆ.
ನಲ್ಲಿಯಲ್ಲಿ ನೀರು ಕುಡಿದ ಕಾಗೆ
ಈ ದೃಶ್ಯ ಕಂಡು ಬಂದಿದ್ದು ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ. ಕಾಗೆಯೊಂದು ಬಂದು ನೀರು ಕುಡಿಯುವುದನ್ನು ಗಮನಿಸಿದ ಸ್ಥಳೀಯರು, ಕಾಗೆ ನೀರು ಕುಡಿಯುವವರೆಗೂ ನೀರು ತುಂಬಲು ಹೋಗದೆ ಮಾನವೀಯತೆ ಮೆರೆದಿದ್ದಾರೆ.
ಒಟ್ಟಾರೆ ಸಾರ್ವಜನಿಕ ನಲ್ಲಿಯಲ್ಲಿ ಬೀಳುವ ನೀರಿನ ಹನಿಯನ್ನು ಕುಡಿಯುವ ಮೂಲಕ ತನ್ನ ನೀರಿನ ದಾಹವನ್ನು ಕಾಗೆ ತೀರಿಸಿಕೊಂಡಿದ್ದು, ನೀರಿನ ದಾಹ ಎಷ್ಟಿದೆ ಎಂಬುದನ್ನು ಇದು ತೋರಿಸುತ್ತದೆ.