ಹುಬ್ಬಳ್ಳಿ:ಕೊರೊನಾ ವೈರಸ್ ಭೀತಿ ಹಿನ್ನೆಲೆ ತಾಲೂಕಿನ ಕುಸುಗಲ್ ಗ್ರಾಮದ ಮಾರುತಿ ನಗರದ ನಿವಾಸಿ ಮಹೇಶ ಮತ್ತು ಲಕ್ಷ್ಮಿ ಎಂಬುವವರು ಸರಳವಾಗಿ ಮದುವೆ ಆಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸರಳ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ - ಹುಬ್ಬಳ್ಳಿ ಸರಳ ಮದುವೆ
ಕೊರೊನಾ ಲಾಕ್ಡೌನ್ ಹಿನ್ನೆಲೆ, ಕುಸುಗಲ್ ಗ್ರಾಮದ ಯವಕ ಯುವತಿ ಸರಳವಾಗಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
![ಸರಳ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ couple](https://etvbharatimages.akamaized.net/etvbharat/prod-images/768-512-7396954-833-7396954-1590762518563.jpg)
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ಲಾಕ್ಡೌನ್ ಹಿನ್ನೆಲೆ, ಮದುವೆ ಕಾರ್ಯಗಳಿಗೆ ಸರ್ಕಾರ ಕೆಲವು ನಿಬಂಧನೆಗಳು ಹಾಗೂ ಸೂಚನೆಗಳನ್ನು ನೀಡಿದ್ದು, ಅದರಂತೆ ಕುಟುಂಬದ 20 ಸದಸ್ಯರಷ್ಟೇ ಈ ಮದುವೆಯಲ್ಲಿ ಭಾಗಿಯಾಗುವ ಮೂಲಕ ಯಾವುದೇ ಆಡಂಬರ ಮಾಡದೇ ಸರಳಾತಿ ಸರಳವಾಗಿ ಈ ಜೋಡಿ ಮದುವೆ ಮಾಡಿಕೊಂಡಿದ್ದಾರೆ.
ಇನ್ನು ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವಂತೆ ಮದುವೆಯಲ್ಲಿ ವಧು - ವರ ಜಾಗೃತಿ ಮೂಡಿಸಿದ್ದು ಸಂಬಂಧಿಕರಿಗೆ ವಿಶೇಷವಾಗಿತ್ತು.