ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ವೊಂದು ರಸ್ತೆ ಪಕ್ಕದಲ್ಲಿರುವ ಜೆರಾಕ್ಸ್ ಅಂಗಡಿ ಸೇರಿದಂತೆ ಮನೆಗಳಿಗೆ ಗುದ್ದಿದ ಘಟನೆ ನವಲಗುಂದ ತಾಲೂಕು ಪಂಚಾಯಿತಿ ಎದುರು ಇಂದು ಬೆಳಗ್ಗೆ ಸಂಭವಿಸಿದೆ.
ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಮನೆ, ಅಂಗಡಿಗಳಿಗೆ ಗುದ್ದಿದ ಕಂಟೇನರ್ - Dharwad Latest News Update
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಪಂಚಾಯಿತಿ ಎದುರು ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ವೊಂದು ರಸ್ತೆಯ ಪಕ್ಕದಲ್ಲಿನ ಅಂಗಡಿ ಸೇರಿದಂತೆ ಮನೆಗಳಿಗೆ ಗುದ್ದಿದ್ದು, ಮನೆಗಳು ಜಖಂ ಆಗಿವೆ. ಅಪಘಾತದಿಂದ ಬಾರಿ ಪ್ರಮಾಣದ ಹಾನಿಯುಂಟಾಗಿದ್ದು, ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತ ಬೆಳ್ಳಂಬೆಳಗ್ಗೆ ನಡೆಡಿದ್ದು, ಅಂಗಡಿ ಮತ್ತು ಮನೆಯ ಹೊರಗೆ ಯಾರು ಇಲ್ಲದ ಹಿನ್ನೆಲೆ ಭಾರಿ ಅನಾಹುತ ತಪ್ಪಿದೆ. ಅಂಗಡಿ ಸೇರಿದಂತೆ ಮನೆಗಳಿಗೆ ಬಾರಿ ಪ್ರಮಾಣದ ಹಾನಿಯುಂಟಾಗಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಆಗಿಲ್ಲ. ಘಟನಾ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮನೆಗೆ ಟ್ಯಾಂಕರ್ ನುಗ್ಗಿದ ಪರಿಣಾಮ ಸ್ಥಳೀಯ ನಿವಾಸಿಗಳು ಮನೆಯಿಂದ ಹೊರಗೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಇದರಿಂದ ಎರಡು ಮನೆಗಳು ಜಖಂಗೊಂಡಿದ್ದು, ವಾಹನದ ಮುಂಭಾಗ ಸಹ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಲಬುರಗಿಯಿಂದ ಕುಂದಾಪುರಕ್ಕೆ ಹೊರಟಿದ್ದ ಕಂಟೇನರ್ ನಿಯಂತ್ರಣ ತಪ್ಪಿ ಮನೆ ಮತ್ತು ಅಂಗಡಿಗೆ ನುಗ್ಗಿದೆ. ಹೆಬಸೂರ ಮತ್ತು ತೋಟದ ಎನ್ನುವವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ.