ಕರ್ನಾಟಕ

karnataka

By

Published : Dec 27, 2019, 12:09 PM IST

ETV Bharat / state

ಪುಟಾಣಿ ಹುಡುಗನ ಬುಕ್​​ನಲ್ಲಿ 'ಐ ಲವ್​ ಯೂ'... ತೆರೆದು ನೋಡಿದ ಡಿಸಿ ದೀಪಾಗೆ ಶಾಕ್​, ಬಾಲಕ ಪರಾರಿ!

ಜಿಲ್ಲಾಧಿಕಾರಿ ದೀಪಾ ಚೋಳನ್​ ಅವರು ಮಳೆಯಿಂದ ಹಾನಿಗೀಡಾದ ಮನೆಗಳ ಪರಿಶೀಲನೆಗೆಂದು ಗ್ರಾಮಗಳಿಗೆ ತೆರಳಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಹುಡುಗರನ್ನು ಮಾತಾಡಿಸುತ್ತ ದೀಪಾ ಚೋಳನ್​ ಅವರು, ಮನೆ ಎದುರು ಪುಸ್ತಕದಲ್ಲಿ ಏನೋ ಬರೆಯುತ್ತಿದ್ದ 6 ನೇ ತರಗತಿಯ ಬಾಲಕನ‌ ಬಳಿ ಹೋಗಿದ್ದಾರೆ. ಆಗ ಆತ ಪುಸ್ತಕದಲ್ಲಿ 'ಐ ಲವ್ ಯು' ಎಂದು ಬರೆದಿದ್ದನ್ನ ಕಂಡು ಡಿಸಿ ದಂಗಾಗಿದ್ದಾರೆ.

DC shocked
'ಐ ಲವ್​ ಯೂ'ಗೆ ದಂಗಾದ ದೀಪಾ ಚೋಳನ್

ಧಾರವಾಡ:ಚೋಟುದ್ದ ಪೋರನೊಬ್ಬ ತನ್ನ ಪುಸ್ತಕದಲ್ಲಿ ಲವ್​ ಲೆಟರ್​ ಬರೆಯುತ್ತಿದ್ದಾಗ ರೆಡ್​ ಹ್ಯಾಂಡ್​ ಆಗಿ ಡಿಸಿ ಕೈಗೆ ಸಿಕ್ಕಿಬಿದ್ದ ಘಟನೆ ಜಿಲ್ಲೆಯ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ.

'ಐ ಲವ್​ ಯೂ'ಗೆ ದಂಗಾದ ದೀಪಾ ಚೋಳನ್

ಗುರುವಾರದಂದು ಜಿಲ್ಲಾಧಿಕಾರಿ ದೀಪಾ ಚೋಳನ್​ ಅವರು ಮಳೆಯಿಂದ ಹಾನಿಗೀಡಾದ ಮನೆಗಳ ಪರಿಶೀಲನೆಗೆಂದು ಗ್ರಾಮಗಳಿಗೆ ತೆರಳಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಹುಡುಗರನ್ನು ಮಾತಾಡಿಸುತ್ತ ದೀಪಾ ಚೋಳನ್​ ಅವರು, ಮನೆ ಎದುರು ಪುಸ್ತಕದಲ್ಲಿ ಏನೋ ಬರೆಯುತ್ತಿದ್ದ 6 ನೇ ತರಗತಿಯ ಬಾಲಕನ‌ ಬಳಿ ಹೋಗಿದ್ದಾರೆ. ಆಗ ಆತ ಪುಸ್ತಕದಲ್ಲಿ 'ಐ ಲವ್ ಯು' ಎಂದು ಬರೆದಿದ್ದನ್ನ ಕಂಡು ಡಿಸಿ ದಂಗಾಗಿದ್ದಾರೆ.

ಇನ್ನು ಡಿಸಿ ಹತ್ತಿರ ಬರುತ್ತಿದ್ದಂತೆಯೇ ಬಾಲಕ ಪುಸ್ತಕ ಬಿಟ್ಟು ಅಲ್ಲಿಂದ ಓಡಿ ಹೋಗಿದ್ದಾನೆ. ಇದನ್ನ ಕಂಡ ದೀಪಾ ಚೋಳನ್​ ಮುಗುಳುನಗು ನಕ್ಕಿದ್ದಾರೆ.

ABOUT THE AUTHOR

...view details