ಹುಬ್ಬಳ್ಳಿ : ಮಳೆ ನೀರಿನ ರಭಸಕ್ಕೆ ಗೋಡೆ ಕುಸಿದು ಬಾಲಕನೊಬ್ಬ ಮೃತಪಟ್ಟರುವ ಘಟನೆ ನಗರದ ಗೋಕುಲ ರೋಡ್ ಪೊಲೀಸ್ ಠಾಣೆ ಎದುರು ನಡೆದಿದೆ. ಮೃತ ಬಾಲಕನನ್ನು ದರ್ಶನ್ (16) ಎಂದು ಗುರುತಿಸಲಾಗಿದೆ.
ಇಂದು ಸಂಜೆ ಸುರಿದ ಭಾರಿ ಮಳೆಗೆ ದಾರುವಾಲಾ ವೈನ್ ಶಾಪ್ ಕೆಳಗಿನ ಕಟ್ಟಡಕ್ಕೆ ರಭಸವಾಗಿ ನೀರು ನುಗ್ಗಿದೆ. ಈ ವೇಳೆ ಬಿಲ್ಡಿಂಗ್ ಒಳಗೆ ಬರುತ್ತಿದ್ದ ನೀರನ್ನು ಹೊರಹಾಕುವಾಗ ಗೋಡೆ ಕುಸಿದು ದರ್ಶನ ಮೇಲೆ ಬಿದ್ದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದರ್ಶನ್ ಇಲ್ಲಿನ ಕಟಿಂಗ್ ಅಂಗಡಿಯ ಮಾಲೀಕನ ಜೊತೆಗೆ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.