ಹುಬ್ಬಳ್ಳಿ:ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕುಂದಗೋಳ- ಯರಗುಪ್ಪಿ ರಸ್ತೆ ಮಾರ್ಗ ಮಧ್ಯದಲ್ಲಿ ನಡೆದಿದೆ.
ನಿಯಂತ್ರಣ ತಪ್ಪಿದ ಬೈಕ್: ಸವಾರರಿಬ್ಬರ ಸಾವು - ಹುಬ್ಬಳ್ಳಿ ಅಪಘಾತ ಸುದ್ದಿ
ಕುಂದಗೋಳ ಯರಗುಪ್ಪಿ ರಸ್ತೆ ಮಾರ್ಗಮಧ್ಯದಲ್ಲಿ ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟ ಸವಾರರು
ಮೃತರು ಗದಗ ತಾಲೂಕಿನ ಮುಳಗುಂದದ ನಿವಾಸಿಗಳಾಗಿದ್ದು, ಮೃತರಲ್ಲಿ ಓರ್ವನನ್ನು ಮಂಜುನಾಥ ಚಿಂಚಲಿ (31) ಎಂದು ಗುರುತಿಸಲಾಗಿದ್ದು, ಮತ್ತೋರ್ವನ ಹೆಸರು ತಿಳಿದುಬಂದಿಲ್ಲ. ಘಟನೆಗೆ ಅತಿ ವೇಗ ಕಾರಣವೆಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ಕುಂದಗೋಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.