ಕರ್ನಾಟಕ

karnataka

ETV Bharat / state

ತಾಯಿ ಸಾವು ಕಂಡು ಗೋಳಾಡಿದ ಮರಿ ಮಂಗ..! - news kannada

ತಾಯಿ ಮಂಗವೊಂದು ಮೃತಪಟ್ಟಿದ್ದು ಅದನ್ನು ಬಿಟ್ಟಿರಲಾರದೇ ಮರಿ ಮಂಗ ಅದರ ಮೇಲೆ ಕುಳಿತು ಗೋಳಾಡುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಈ ದೃಶ್ಯ ನೋಡುಗರ ಕಣ್ಣಂಚಲ್ಲಿ ನೀರು ತರಿಸಿತ್ತು.

ತಾಯಿ ಸಾವು ಕಂಡು ಗೋಳಾಡುತ್ತಿರುವ ಮರಿ ಮಂಗ

By

Published : Mar 22, 2019, 1:02 AM IST

ಧಾರವಾಡ: ಸಾವನ್ನಪ್ಪಿದ ಮಂಗಕ್ಕೆ ಸ್ಥಳೀಯರು ಪೂಜೆ ಮಾಡುತ್ತಿರುವಾಗ, ಅದರ ಮರಿ ತಾಯಿಯನ್ನು ಬಿಟ್ಟಿರಲಾರದೆ ಗೋಳಾಡುತ್ತಿರುವ ದೃಶ್ಯ ನೋಡುಗರ ಕಣ್ಣಲ್ಲಿ ನೀರನ್ನು ಬರಿಸುತ್ತಿತ್ತು.

ಈ ಘಟನೆ ಇಲ್ಲಿನ ಸಾಧನಕೇರಿಯಲ್ಲಿ ನಡೆದಿದೆ. ಮರದಲ್ಲಿ ಕುಳಿತಿದ್ದ ತಾಯಿ ಮಂಗವೊಂದು ಆಕಸ್ಮಿಕವಾಗಿ ನಿಧನ ಹೊಂದಿದಾಗ, ಅದರ ಮರಿ ಗೋಳಾಡುತ್ತಿದ್ದ ದೃಶ್ಯ ನೋಡುಗರ ಮನಕಲುಕುವಂತಿತ್ತು.

ತಾಯಿ ಸಾವು ಕಂಡು ಗೋಳಾಡುತ್ತಿರುವ ಮರಿ ಮಂಗ

ಧಾರವಾಡದಲ್ಲಿ ಎಲ್ಲಿಯಾದರೂ ಮಂಗ ನಿಧನ ಹೊಂದಿದರೆ ಪೂಜೆ ಮಾಡಿ ಅಂತ್ಯ ಸಂಸ್ಕಾರ ಮಾಡುವ ಸಂಪ್ರದಾಯ ಇದೆ. ಅದೇ ರೀತಿಯಲ್ಲಿ ಸಾಧನಕೇರಿಯಲ್ಲಿಯೂ ಕೂಡ ಮೃತಪಟ್ಟ ತಾಯಿ ಮಂಗನನ್ನು ಧ್ವಜದ ಕಟ್ಟೆಯಲ್ಲಿ ಕೂರಿಸಿ ಪೂಜೆ ಮಾಡಲಾಯಿತು. ಈ ವೇಳೆ ಮರಿ ಮಂಗ ತನ್ನ ತಾಯಿಗೆ ಪೂಜೆ ಮಾಡುತ್ತಿದ್ದನ್ನು ನೋಡುತ್ತಲೇ ತನ್ನ ದುಃಖ ವ್ಯಕ್ತಪಡಿಸುತ್ತಿತ್ತು.



ABOUT THE AUTHOR

...view details