ಕರ್ನಾಟಕ

karnataka

By

Published : Nov 25, 2020, 11:09 AM IST

ETV Bharat / state

ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ 43 ವರ್ಷದ ತಾಯಿಗೆ ಮತ್ತೆ ಮಗು ಜನನ: ದಂಪತಿಗೆ ಹಬ್ಬದ ಸಂಭ್ರಮ

18 ವರ್ಷದ ಮಗಳು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟ ಬಳಿಕ ದಂಪತಿ ಮತ್ತೆ ಮಗು ಪಡೆಯಲು ಇಚ್ಛಿಸಿದ್ದರು. ಇವರ ಆಸೆಯಂತೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ 43 ವರ್ಷದ ತಾಯಿ ಇದೀಗ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.

a-baby-girl-is-born-to-a-mother-who-has-undergone-surgery-after-in-her-43-years
43 ವರ್ಷದ ತಾಯಿಗೆ ಹೆಣ್ಣು ಮಗು ಜನನ

ಹುಬ್ಬಳ್ಳಿ: ವೈದ್ಯಕೀಯ ಲೋಕದಲ್ಲಿ ದಿನಕ್ಕೊಂದು ಅಚ್ಚರಿಗಳು ಸಂಭವಿಸುವುದು ಸಾಮಾನ್ಯ ಎಂಬಂತಾಗಿದೆ. ಇದೇ ರೀತಿ ಹಿಂದೊಮ್ಮೆ ತಾಯಿಯಾಗಿ ಬಳಿಕ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಇದೀಗ ತಮ್ಮ 43ನೇ ವಸಂತದಲ್ಲಿ ಮತ್ತೊಮ್ಮೆ ತಾಯಿಯಾಗಿದ್ದಾರೆ.

ಕುಂದಗೋಳ ತಾಲೂಕಿನ ಸಂಶಿ ನಿವಾಸಿಗಳಾದ ಶೋಭಾ ಹಾಗೂ ಚಂದಪ್ಪ ಹಾವೇರಿ ದಂಪತಿ ಇದೀಗ ಮಗು ಪಡೆದ ಸಂಭ್ರಮದಲ್ಲಿದ್ದಾರೆ. ಕಳೆದೊಂದು ವರ್ಷದ ಹಿಂದೆ 18 ವರ್ಷದ ಮಗಳನ್ನು ಅನಾರೋಗ್ಯದಿಂದಾಗಿ ಕಳೆದುಕೊಂಡಿದ್ದರು. ಈ ಘಟನೆಯ ಬಳಿಕ ಮಗು ಇಲ್ಲವೆಂಬ ಕೊರಗು ದಂಪತಿಗೆ ಕಾಡಲಾರಂಭಿಸಿತ್ತು.

ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ 43 ವರ್ಷದ ತಾಯಿಗೆ ಹೆಣ್ಣು ಮಗು ಜನನ

ಬಳಿಕ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಶ್ರೀಧರ್ ದಂಡೆಪ್ಪನವರನ್ನು ಭೇಟಿಯಾಗಿದ್ದಾರೆ. ಅವರು ಮಕ್ಕಳಾಗುವ ಕುರಿತು ಸಲಹೆಗಳನ್ನು ನೀಡಿದ್ದು, ದಂಪತಿ ಚಾಚು ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಒಂದೊಮ್ಮೆ ಶಸ್ತ್ರ ಚಿಕಿತ್ಸೆ ಮಾಡಿದ್ದ ಗರ್ಭ ಚೀಲದ ಭಾಗವನ್ನು ಮತ್ತೊಮ್ಮೆ ಯಶಸ್ವಿ ಮರು ಜೋಡಣೆಯಲ್ಲಿ ವೈದ್ಯರು ಯಶಸ್ಸು ಕಂಡಿದ್ದರು.

ಆದರೆ ಇದಾದ ಬಳಿಕವೂ ಮಕ್ಕಳಾಗುವುದು ತುಂಬಾನೆ ವಿರಳವಾಗಿತ್ತು. ಆದರೆ ದಂಪತಿಯ ಆಸೆಯಂತೆ ಕೊನೆಗೂ ಹೆಣ್ಣು ಮಗುವಿನ ಜನ್ಮ ನೀಡಿದ್ದಾರೆ. ಹೆಣ್ಣು ಮಗು ಮತ್ತು ತಾಯಿ ಆರೋಗ್ಯವಾಗಿದ್ದು, ಮನೆ ದೀಪ ಬೆಳಗಿಸಿದ ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ.

ABOUT THE AUTHOR

...view details