ಕರ್ನಾಟಕ

karnataka

ETV Bharat / state

ಡ್ರಾಪ್ ಕೊಡುವ ನೆಪದಲ್ಲಿ ಹಣ ದೋಚಿದ ಆರೋಪಿ‌ ಬಂಧನ - money theft case

ಹಣ ಎಗರಿಸುವ ದಂಧೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಸ್​ಗಾಗಿ ಕಾಯುತ್ತಿದ್ದ ವ್ಯಕ್ತಿಗೆ ಯಾವ ಊರಿಗೆ ಹೋಗಬೇಕು? ಎಲ್ಲಿಗೆ ಹೋಗಬೇಕು ಎಂದು ನಯವಾಗಿ ಮಾತನಾಡಿದ ಈ ವ್ಯಕ್ತಿ, ಡ್ರಾಪ್​ ಕೊಡುವ ಮೂಲಕ ಅವರಿಂದ ಹಣ ಪೀಕಿದ್ದ. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಆಸಾಮಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

A accused arrested after money theft
ಬಂಧಿತ ಆರೋಪಿ

By

Published : Jun 30, 2021, 8:05 PM IST

ಧಾರವಾಡ:ಡ್ರಾಪ್​ ಕೊಡುವ ನೆಪದಲ್ಲಿ ಬೈಕ್​ನಲ್ಲಿ ಹತ್ತಿಸಿಕೊಂಡು ಹೋಗಿ ಹಣ ದೋಚಿದ ಆರೋಪಿಯೊಬ್ಬನನ್ನು ಧಾರವಾಡದ ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ತಡಸಿನಕೊಪ್ಪ ಗ್ರಾಮದ ನಿವಾಸಿ ಗೋವಿಂದ ಭೀಮಪ್ಪ ಬಂಗಾರಿ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಬಂಧಿತನಿಂದ ಹೆಚ್​ಎಫ್​ ಡಿಲಕ್ಸ್ ಬೈಕ್, ನಗದು ಹಣ ಸೇರಿದಂತೆ ಒಟ್ಟು 53 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಉದ್ಯಯಮನಗರದ ನಿವಾಸಿ ಪರಮೇಶ್ವರ್​ ಶಂಕರನಾರಾಯಣ್​ ಎಂಬಾತರು ಧಾರವಾಡದ ಕಲಘಟಗಿ ರಸ್ತೆಯ ವಿಜಯಾ ಬ್ಯಾಂಕ್‌ ಹತ್ತಿರ ತಮ್ಮ ಊರಿಗೆ ಹೋಗಲು ನಿಂತುಕೊಂಡಾಗ ಡ್ರಾಪ್ ಕೊಡುವ ನೆಪದಲ್ಲಿ ಅವರನ್ನು ಹೊಡೆದು ಹಣ ಎಗರಿಸಿಕೊಂಡು ಹೋಗಿದ್ದ.

ಈ ಕುರಿತು ಪರಮೇಶ್ವರ್​ ಅವರು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details