ಹುಬ್ಬಳ್ಳಿ:ಕೊರೊನಾ ಇಡೀ ಜಗತ್ತನ್ನೇ ನಡುಗಿಸಿದೆ. ಕೊರೊನಾ ಒಮ್ಮೆ ದೃಢಪಟ್ಟರೆ ಎಂತವರು ಕೂಡ ಭಯ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಇದರ ನಡುವೆ 90 ವರ್ಷದ ಅಜ್ಜಿಯೊಬ್ಬರು ಕೊರೊನಾದಿಂದ ಗುಣಮುಣರಾಗಿ ಹೊಸ ಆಶಾಭಾವ ಮೂಡಿಸಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರ ಬಡಾವಣೆಯ ಮಧುರಾ ಎಸ್ಟೇಟ್ನ ನಿವಾಸಿ ಹೊನ್ನಮ್ಮ ಎಂಬ 90 ವರ್ಷದ ವೃದ್ಧೆ ಆಸ್ಪತ್ರೆಯಿಂದ ಇಂದು ಬಿಡುಗಡೆಯಾಗಿದ್ದಾರೆ. 9 ದಿನಗಳ ಹಿಂದೆ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಉಸಿರಾಟದ ತೊಂದರೆಯಿಂದ ವೆಂಟಿಲೇಟರ್ ಸಹಾಯದಿಂದ ಎರಡು ದಿನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.