ಹುಬ್ಬಳ್ಳಿ:ಸುಮಾರು 85 ವರ್ಷಗಳ ಹಳೆಯ ಪ್ರಕರಣವೊಂದನ್ನು ಹುಬ್ಬಳ್ಳಿ ಜೆಎಂಎಫ್ಸಿ ನ್ಯಾಯಾಲಯ ಜುಲೈ 8 ರಂದು ನಡೆಯುವ ಲೋಕ ಆದಾಲತ್ನಲ್ಲಿ ಇತ್ಯರ್ಥ ಪಡಿಸಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಬಾರಿ ರಸ್ತೆಯ ಸರ್ವೆ ಮಾಡುವ ಮೂಲಕ ವಾದ ಮಂಡಿಸಲಾಗಿತ್ತು, ಇದೀಗ ಸುದೀರ್ಘ 85 ವರ್ಷಗಳ ವ್ಯಾಜ್ಯ ಇತ್ಯರ್ಥವಾಗಿದೆ. ಕಕ್ಷಿಗಾರರು ರಾಜಿಯಾಗಿ ಸಾಮೂಹಿಕವಾಗಿ ಉಪಯೋಗಿಸುತ್ತೇವೆ ಎಂದು ರಾಜಿ ಪತ್ರ ಸಲ್ಲಿಸಿದ್ದಾರೆ.
ನಗರದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕಕ್ಷಿಗಾರರು ಮಾತನಾಡಿ, ಪ್ರತಿವಾದಿ ಪರ ವಕೀಲರು ಹಾಗೂ ಪ್ರಧಾನ ದಿವಾನಿ ನ್ಯಾಯಾಧೀಶರು ನಗರದ ಸಿಬಿಟಿ ಬಳಿ ಇರುವಂತಹ ರಸ್ತೆ ವಿವಾದ 85ವರ್ಷಗಳ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪರ ಹಾಗೂ ವಿರೋಧ ಕಕ್ಷಿಗಾರರನ್ನು ರಾಜಿ ಸಂಧಾನ ಮಾಡಿಸುವ ಮೂಲಕ ಮಾದರಿಯಾಗಿದ್ದಾರೆ. ನ್ಯಾಯಾಲಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುವಂತಹ ಕಾರ್ಯವನ್ನು ಮಾಡಲಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಬಳಿಕ ಪ್ರಧಾನ ದಿವಾನಿ ನ್ಯಾಯಾಧೀಶರಾದ ರಾಜಶೇಖರ ತಿಳಗಂಜಿ ಮಾತನಾಡಿ, ಜೆಎಂಎಫ್ಸಿಯಲ್ಲಿ 85 ವರ್ಷಗಳ ಪ್ರಕರಣವೊಂದನ್ನು ರಾಜಿ ಮಾಡಲಾಗಿದೆ. ರಸ್ತೆ ಕುರಿತು ಇಬ್ಬರು ಕಕ್ಷಿಗಾರರ ನಡುವೆ ಜಗಳವಿತ್ತು. ಸುಮಾರು 85 ವರ್ಷಗಳಿಂದ ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ಆಗುತಿತ್ತು. ಇದಕ್ಕಾಗಿ ಕಕ್ಷಿದಾರರು ಆರು ಬಾರಿ ಕೋರ್ಟಿನಿ ಮೆಟ್ಟಿಲೇರಿದ್ದರು. ಆರು ಬಾರಿ ತೀರ್ಪು ಬಂದಿತ್ತು. ಅಲ್ಲದೇ ಆರು ಬಾರಿ ರಸ್ತೆ ಸರ್ವೇಯನ್ನೂ ಮಾಡಲಾಗಿತ್ತು. ಆದರೂ ಕೂಡು ಕಕ್ಷಿದಾರರಿಬ್ಬರಲ್ಲಿ ಜಗಳ ಮುಂದುವರೆದಿತ್ತು. ಇದೀಗ ಈ ಇಬ್ಬರು ಕಕ್ಷಿದಾರರನ್ನು ಜನತಾ ನ್ಯಾಯಾಲಯದಲ್ಲಿ ರಾಜಿ ಮಾಡಿಸಿದ್ದೇವೆ. ಇಬ್ಬರು ಸಾಮೂಹಿಕವಾಗಿ ಬಳಸುವುದಾಗಿ ಜಾರಿ ಪತ್ರವನ್ನು ಸಲ್ಲಿಸಿದ್ದಾರೆ.
ಇದಕ್ಕೆ ಎಲ್ಲ ವಕೀಲರು ಸಹಾಕರ ನೀಡಿದ್ದರಿಂದ 85 ವರ್ಷದ ಹಳೆಯ ಪ್ರಕಣ ಇತ್ಯರ್ಥವಾಗಿದೆ. ಪ್ರತಿನಿತ್ಯ 8-10 ಪ್ರಕರಣಗಳು ರಾಜಿ ಸಂಧಾನ ಮೂಲಕ ಇತ್ಯರ್ಥವಾಗುತ್ತಿದ್ದು, ಅದಕ್ಕಾಗಿ ಜುಲೈ 8 ರಂದು ನಡೆಯುವ ಲೋಕ್ ಅದಾಲತ್ ನಲ್ಲಿ ಕಕ್ಷಿಗಾರರು ತಮ್ಮ ಹಳೆಯ ಕೇಸ್ ಗಳಿದ್ದರೆ ತಮ್ಮ ವಕೀಲರ ಸಹಕಾರದೊಂದಿಗೆ ಇತ್ಯರ್ಥ ಮಾಡಿಕೊಳ್ಳಬೇಕೆಂದು ಮನವಿ ಇದೇ ವೇಳೆ ಮನವಿ ಮಾಡಿದರು.