ಧಾರವಾಡ: ಜಿಲ್ಲೆಯಲ್ಲಿ ಒಂದೇ ದಿನ 81 ಜನರಲ್ಲಿ ಕೊರೊನಾ ಲಕ್ಷಣ ಪತ್ತೆಯಾಗಿದೆ.
ಧಾರವಾಡದಲ್ಲಿ ಆತಂಕ: ಒಂದೇ ದಿನ 81 ಜನರಲ್ಲಿ ಕೊರೊನಾ ಲಕ್ಷಣ ಪತ್ತೆ! - ಶಂಕಿತ ಕೊರೊನಾ ಲಕ್ಷಣ
ಧಾರವಾಡದಲ್ಲಿ ಒಂದೇ ದಿನ 81 ಜನರಲ್ಲಿ ಕೊರೊನಾ ಲಕ್ಷಣ ಪತ್ತೆಯಾಗಿದ್ದು, ಶಂಕಿತರ ಕಫದ ಮಾದರಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.
ಧಾರವಾಡದ 81 ಜನರಲ್ಲಿ ಶಂಕಿತ ಕೊರೊನಾ ಲಕ್ಷಣ ಪತ್ತೆ..!
24 ಗಂಟೆ ಅವಧಿಯಲ್ಲಿ 81 ಜನರಲ್ಲಿ ಕೊರೊನಾ ಲಕ್ಷಣಗಳು ಪತ್ತೆಯಾಗಿದ್ದು, ಶಂಕಿತರ ಕಫದ ಮಾದರಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ನಿನ್ನೆ ದಾಖಲಾಗಿದ್ದ 50 ಶಂಕಿತರ ಪೈಕಿ 10 ವರದಿ ನೆಗೆಟಿವ್ ಬಂದಿದೆ. 40 ಜನರ ವರದಿ ಬಾಕಿಯಿದೆ.
ನಿನ್ನೆಯ ಬಾಕಿ ಸೇರಿ 121 ಜನರ ವರದಿಗಾಗಿ ಜಿಲ್ಲಾಡಳಿತ ನಿರೀಕ್ಷೆಯಲ್ಲಿದೆ. ಇಲ್ಲಿಯವರೆಗೆ ಒಟ್ಟು 905 ಜನರ ಮೇಲೆ ನಿಗಾ ವಹಿಸಲಾಗಿದೆ. 229 ಜನರಿಗೆ 14 ದಿನಗಳ ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ.