ಧಾರವಾಡ: ಜಿಲ್ಲೆಯಲ್ಲಿ 81 ಶಂಕಿತರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇನ್ನೂ 80 ಶಂಕಿತರ ವರದಿ ಬಾಕಿ ಇದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿದ ಹೆಲ್ತ್ ಬ್ಯುಲೆಟಿನ್ನಲ್ಲಿ ತಿಳಿಸಲಾಗಿದೆ.
ಧಾರವಾಡ: 81 ಕೊರೊನಾ ಶಂಕಿತರ ವರದಿ ನೆಗೆಟಿವ್ - corona virus test in dharwad
ಧಾರವಾಡ ಜಿಲ್ಲೆಯ 161 ಶಂಕಿತರ ಪೈಕಿ 81 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಉಳಿದ 80 ಶಂಕಿತರ ವರದಿ ಬಾಕಿ ಇದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
![ಧಾರವಾಡ: 81 ಕೊರೊನಾ ಶಂಕಿತರ ವರದಿ ನೆಗೆಟಿವ್ 81 corona suspected test negative](https://etvbharatimages.akamaized.net/etvbharat/prod-images/768-512-6979883-361-6979883-1588088773557.jpg)
ಜಿಲ್ಲಾಧಿಕಾರಿ ದೀಪಾ ಚೋಳನ್
ನಿನ್ನೆ (ಏಪ್ರಿಲ್ 27)ವರೆಗೆ ದಾಖಲಾಗಿದ್ದ 161 ಕೊರೊನಾ ಶಂಕಿತ ಪ್ರಕರಣಗಳು ಇವಾಗಿವೆ. ಇಂದು 237 ಜನರಲ್ಲಿ ಕೊರೊನಾ ಗುಣಲಕ್ಷಣ ಪತ್ತೆಯಾಗಿದೆ. 8 ಶಂಕಿತರನ್ನು ಆಸ್ಪತ್ರೆಯ ಐಸೊಲೇಷನ್ನಲ್ಲಿ ಇರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಇಲ್ಲಿಯವರೆಗೆ ಒಟ್ಟು 2757 ಜನರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ. ಅದರಲ್ಲಿ 1976 ಜನರಿಗೆ 14 ದಿನಗಳ ಕಾಲ ಐಸೊಲೇಷನ್ನಲ್ಲಿ ಇಡಲಾಗಿದೆ. ಈಗಾಗಲೇ 70 ಜನರು 14 ದಿನಗಳ ಐಸೊಲೇಷನ್ ಹಾಗೂ 703 ಜನರು 28 ದಿನಗಳ ಐಸೊಲೇಷನ್ ಪೂರ್ಣಗೊಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.