ಧಾರವಾಡ :ಜಿಲ್ಲೆಯಲ್ಲಿ ಇಂದು ಒಂದೇ ದಿನ 157 ಜನರಲ್ಲಿ ಸೋಂಕು ಕಾಣಿಸಿದೆ. ಇದರಿಂದ ಸೋಂಕಿತರ ಸಂಖ್ಯೆ 1,731ಕ್ಕೆ ಏರಿಕೆಯಾಗಿದ್ರೆ, ಒಂದೇ ದಿನ 8 ಮಂದಿ ಮೃತಪಟ್ಟಿದ್ಧಾರೆ.
ಐಎಲ್ಐ ಸಮಸ್ಯೆಯಿಂದ ದಾಖಲಾದ 79 ಜನರಿಗೆ ಸೋಂಕು ದೃಢವಾಗಿದೆ. ಅಲ್ಲದೆ ಸೋಂಕಿತರ ಸಂಪರ್ಕದಿಂದ 59 ಜನರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇನ್ನು, ಅಂತರ್ ಜಿಲ್ಲಾ ಪ್ರವಾಸದಿಂದ 5 ಜನರಿಗೆ ಸೋಂಕು ದೃಢವಾದ್ರೆ, 14 ಸೋಂಕಿತರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.