ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಬರೋಬ್ಬರಿ 180 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಡುವ ಮೂಲಕ ಇದೀಗ ಸೋಂಕಿತರ ಸಂಖ್ಯೆ 3,911ಕ್ಕೇರಿದೆ.
ಧಾರವಾಡದಲ್ಲಿ 180 ಕೊರೊನಾ ಕೇಸ್ ಪತ್ತೆ... 8 ಮಂದಿ ಬಲಿ! - Darwada latest news
ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಮತ್ತು ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಇಂದು ಜಿಲ್ಲೆಯಲ್ಲಿ 180 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 8 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
![ಧಾರವಾಡದಲ್ಲಿ 180 ಕೊರೊನಾ ಕೇಸ್ ಪತ್ತೆ... 8 ಮಂದಿ ಬಲಿ! Darwada corona case](https://etvbharatimages.akamaized.net/etvbharat/prod-images/768-512-07:38:54:1596118134-kn-dwd-4-covid-positive-av-ka10001-30072020193736-3007f-1596118056-356.jpg)
Darwada corona case
ಜಿಲ್ಲೆಯ ಮೇಲೆ ಕೊರೊನಾ ಕೆಂಗಣ್ಣು ಬಿದ್ದಿದ್ದು,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 124ಕ್ಕೆ ತಲುಪಿದೆ. ಇಂದು 152 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 1,665 ಮಂದಿ ಕೊರೊನಾ ಗೆದ್ದು ಮನೆ ಸೇರಿದ್ದಾರೆ. ಸದ್ಯ 2,122 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.