ಧಾರವಾಡ: ಕೊರೊನಾ ಕೆಂಗಣ್ಣು ಜಿಲ್ಲೆ ಮೇಲೆ ಬಿದ್ದಿದ್ದು ಇಂದು 8 ಮಂದಿ ಮೃತಪಟ್ಟಿದ್ದಾರೆ. ಸೋಂಕಿಗೊಳಗಾಗಿ ಸಾವನಪ್ಪಿದವರ ಸಂಖ್ಯೆ 147ಕ್ಕೇರಿದೆ.
ಧಾರವಾಡದಲ್ಲಿ 8 ಜನರ ಬಲಿ....181 ಮಂದಿಗೆ ಸೋಂಕು - Darwada latest news
181 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು 8 ಮಂದಿ ಮೃತಪಟ್ಟಿದ್ದಾರೆ. ಹೆಚ್ಚುತ್ತಿರುವ ಸೋಂಕು ಪ್ರಕರಣಗಳು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ.
Darwada corona case
ದಿನೇ-ದಿನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಇಂದು 181 ಜನರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 4456ಕ್ಕೇರಿದೆ.
ಇಂದು 67 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 1846 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 2463 ಸಕ್ರಿಯ ಪ್ರಕರಣಗಳಿವೆ.