ಧಾರವಾಡ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 77 ಹಾಗೂ ಹೊರ ರಾಜ್ಯದ ಓರ್ವ ಸೇರಿ ಒಟ್ಟು 78 ಬ್ಲಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಕಿಮ್ಸ್ನಲ್ಲಿ ವಿವಿಧ ಜಿಲ್ಲೆಯ 78 ಬ್ಲಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ: ಡಿಸಿ ಮಾಹಿತಿ - ಹುಬ್ಬಳ್ಳಿ ಡಿಸಿ
ರಾಜ್ಯದಲ್ಲಿ ಬ್ಲಾಕ್ ಫಂಗಸ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಒಂದರಲ್ಲೇ ಒಟ್ಟು 78 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಕಿಮ್ಸ್ನಲ್ಲಿ ವಿವಿಧ ಜಿಲ್ಲೆಯ 78 ಬ್ಲಾಕ್ ಫಂಗಸ್ ರೊಗಿಗಳಿಗೆ ಚಿಕಿತ್ಸೆ:
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕಿಮ್ಸ್ ಆಸ್ಪತ್ರೆಯಲ್ಲಿ ಧಾರವಾಡ ಜಿಲ್ಲೆಯ 18 ಸೋಂಕಿತರು ಮಾತ್ರ ಇದ್ದು, ಉಳಿದಂತೆ ಬೆಳಗಾವಿ 16, ಬಾಗಲಕೋಟೆ 16, ಗದಗ 05, ಕೊಪ್ಪಳ 05, ರಾಯಚೂರು 04, ಹಾವೇರಿ 04, ವಿಜಯಪುರ 04, ಬಳ್ಳಾರಿ 02, ಉತ್ತರ ಕನ್ನಡ 01, ತುಮಕೂರ 01, ಚಿತ್ರದುರ್ಗ 01 ಮತ್ತು ಹೊರ ರಾಜ್ಯದ ಓರ್ವ ಬ್ಲಾಕ್ ಫಂಗಸ್ ಸೋಂಕಿತ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.