ಹುಬ್ಬಳ್ಳಿ-ಧಾರವಾಡ :ರಾಜ್ಯ ವಿಧಾನಸಭಾ ಚುನಾವಣೆ 2023ರ ಮತದಾನದ ಪ್ರಕ್ರಿಯೆ ಶಾಂತಿಯುತವಾಗಿ ಜಿಲ್ಲೆಯಲ್ಲಿ ಪೂರ್ಣಗೊಂಡಿದೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇನ್ನೂ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿ 92 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.
ಇದನ್ನೂ ಓದಿ :ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಕ್ರಮ ಸಂಖ್ಯೆ ಅದಲು ಬದಲಾಗಿ ಗೊಂದಲ: ಅಧಿಕಾರಿಗಳ ವಿರುದ್ಧ ಬೆಂಬಲಿಗರ ಆಕ್ರೋಶ
ನವಲಗುಂದ ತಾಲೂಕಿನಲ್ಲಿ 13 ಅಭ್ಯರ್ಥಿಗಳು, ಕುಂದಗೋಳ 14 ಅಭ್ಯರ್ಥಿಗಳು, ಧಾರವಾಡ 11 ಅಭ್ಯರ್ಥಿಗಳು, ಹು- ಧಾ ಪೂರ್ವದಲ್ಲಿ 11 ಹಾಗೂ ಹು-ಧಾ ಕೇಂದ್ರದಲ್ಲಿ 16 ಅಭ್ಯರ್ಥಿಗಳು, ಪಶ್ಚಿಮದಲ್ಲಿ 15ಅಭ್ಯರ್ಥಿಗಳು, ಕಲಘಟಗಿ ಕ್ಷೇತ್ರದ 12 ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಿಗೆ ಭದ್ರವಾಗಿದೆ. ಚುನಾವಣಾ ಸಿಬ್ಬಂದಿ ಸೀಲ್ ಹಾಕಿದ ಮತಯಂತ್ರಗಳನ್ನು ಬಿಗಿ ಭದ್ರತೆದೊಂದಿಗೆ ಮತ ಎಣಿಕೆ ಕೇಂದ್ರದತ್ತ ಧಾರವಾಡಕ್ಕೆ ರವಾನೆ ಮಾಡಲಾಗಿದೆ.