ಕರ್ನಾಟಕ

karnataka

ETV Bharat / state

ಧಾರವಾಡದಿಂದ ವಲಸೆ ಹಕ್ಕಿಗಳನ್ನ ಗೂಡು ಸೇರಿಸಲು ತೆರಳಿದ 70ಕ್ಕೂ ಹೆಚ್ಚು ಬಸ್‌ಗಳು.. - Dharwad District

ವಿವಿಧ ಜಿಲ್ಲೆಗಳಿಂದ ಕೆಲಸ ಅರಸಿ ಬಂದು ಲಾಕ್​ಡೌನ್​ ಘೋಷಣೆ ಬಳಿಕ ಧಾರವಾಡದಲ್ಲೇ ಬಾಕಿಯಾಗಿದ್ದ ವಿವಿಧ ಜಿಲ್ಲೆಗಳ ಕಾರ್ಮಿಕರನ್ನು ಅವರವರ ಜಿಲ್ಲೆಗಳಿಗೆ ಮರಳಿಸುವ ಕೆಲಸವನ್ನು ಧಾರವಾಡ ಜಿಲ್ಲಾಡಳಿತ ಮಾಡಿದೆ.

70 buses carried other district people to their native
ಹುಬ್ಬಳ್ಳಿ: ರಸ್ತೆಗಿಳಿದ 70ಕ್ಕೂ ಹೆಚ್ಚು ಬಸ್ಸುಗಳು ಹೋಗಿದ್ದೆಲ್ಲಿ ಗೊತ್ತಾ?

By

Published : May 2, 2020, 9:42 AM IST

ಹುಬ್ಬಳ್ಳಿ :ಲಾಕ್​ಡೌನ್​ ಹಿನ್ನೆಲೆ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನ ಸಾಗಿಸಲು 70ಕ್ಕೂ ಹೆಚ್ಚು ಬಸ್‌ಗಳು ರಸ್ತೆಗಿಳಿದಿವೆ.

ಇತರ ಜಿಲ್ಲೆಗಳಿಂದ ಕೆಲಸ ಅರಸಿ ಬಂದು ಲಾಕ್​ಡೌನ್​ ಘೋಷಣೆ ಬಳಿಕ ಧಾರವಾಡದಲ್ಲೇ ಸಿಲುಕಿದ್ದ ವಿವಿಧ ಜಿಲ್ಲೆಗಳ ಕಾರ್ಮಿಕರನ್ನು ಅವರವರ ಜಿಲ್ಲೆಗಳಿಗೆ ಮರಳಿಸುವ ಕೆಲಸವನ್ನು ಧಾರವಾಡ ಜಿಲ್ಲಾಡಳಿತ ಮಾಡಿದೆ. ಕಲಬುರ್ಗಿ, ವಿಜಯಪುರ, ರಾಯಚೂರು, ಬೆಳಗಾವಿ ಸೇರಿ ಮತ್ತಿತರ ಜಿಲ್ಲೆಗಳಿಂದ ಬಂದಿದ್ದ ಒಟ್ಟು 1200 ಜನ ಕಾರ್ಮಿಕರನ್ನು ಮರಳಿ ಅವರ ಜಿಲ್ಲೆಗಳಿಗೆ ತಲುಪಿಸುವ ಕೆಲಸವಾಗಿದೆ.

ಹುಬ್ಬಳ್ಳಿಯಿಂದ ಕಲಬುರ್ಗಿಗೆ 886 ಜನರನ್ನ 43 ಬಸ್‌ಗಳಲ್ಲಿ, ಬಿಜಾಪುರಕ್ಕೆ 522 ಜನರನ್ನ 25 ಬಸ್‌ಗಳಲ್ಲಿ, ಬೆಳಗಾವಿಗೆ 44 ಜನರನ್ನ 2 ಬಸ್‌ಗಳಲ್ಲಿ, ರಾಯಚೂರಿಗೆ 15 ಜನರನ್ನ ಒಂದು ಬಸ್ ನಲ್ಲಿ ಕಳುಹಿಸಿಕೊಡಲಾಗಿದೆ. ಎಲ್ಲಾ ಕಾರ್ಮಿಕರನ್ನು ಉಚಿತವಾಗಿ ಸಾಗಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ABOUT THE AUTHOR

...view details