ಕರ್ನಾಟಕ

karnataka

ETV Bharat / state

ಗಾಂಜಾ ಪ್ರಕರಣ ಮುಚ್ಚಿಹಾಕಲು ಯತ್ನ: ಇನ್ಸ್​ಪೆಕ್ಟರ್ ಸೇರಿ 7 ಸಿಬ್ಬಂದಿ ಸಸ್ಪೆಂಡ್‌

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಿಂದ ವಶಕ್ಕೆ ಪಡೆದ ಮಾದಕ ವಸ್ತುವನ್ನು ಪೊಲೀಸರೇ ಮಾರಾಟ ಮಾಡುತ್ತಿದ್ದ ಗಂಭೀರ ಆರೋಪ ಕೇಳಿ ಬಂದಿದ್ದು, ಘಟನೆ ಸಂಬಂಧ ನವನಗರ ಠಾಣೆಯ ಇನ್ಸ್​ಪೆಕ್ಟರ್ ಸೇರಿದಂತೆ 7 ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

7 ಸಿಬ್ಬಂದಿ ಅಮಾನತು
7 ಸಿಬ್ಬಂದಿ ಅಮಾನತು

By

Published : Oct 10, 2021, 11:13 AM IST

Updated : Oct 10, 2021, 12:28 PM IST

ಹುಬ್ಬಳ್ಳಿ: ಗಾಂಜಾ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪದಡಿ ಎಪಿಎಂಸಿ-ನವನಗರ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್ ಸೇರಿದಂತೆ ಏಳು ಸಿಬ್ಬಂದಿಯನ್ನು ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಲಾಭೂರಾಮ್​ ಆದೇಶ ಹೊರಡಿಸಿದ್ದಾರೆ.

ಎಪಿಎಂಸಿ - ನವನಗರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ವಿಶ್ವನಾಥ ಚೌಗಲೆ, ಎಎಸ್‌ಐ ಕರಿಯಪ್ಪಗೌಡ, ಕಾನ್ಸ್​ಟೇಬಲ್‌ಗಳಾದ ವಿಕ್ರಮ್​ ಪಾಟೀಲ, ನಾಗರಾಜ, ಶಿವರಾಜ ಕುಮಾರ ಮೇತ್ರಿ ಹಾಗೂ ಗೋಕುಲ ರಸ್ತೆ ಠಾಣೆಯ ಮಹಿಳಾ ಕಾನ್ಸ್​ಟೇಬಲ್ ದಿಲ್ಯಾದ, ಹೊನ್ನಪ್ಪನವರ ಎಂಬುವರನ್ನು ಅಮಾನತು ಮಾಡಲಾಗಿದೆ.

ಗಾಂಜಾ ಮಾರಾಟಗಾರರ ಕುರಿತು ಎಪಿಎಂಸಿ ಠಾಣೆ ಸಿಬ್ಬಂದಿಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಒಂದೂವರೆ ಕೆಜಿ ಗಾಂಜಾ ವಶಕ್ಕೆ ಪಡೆದಿದ್ದರು. ಆದರೆ, ಈ ಕುರಿತು ಪ್ರಕರಣ ದಾಖಲಿಸದ ಪೊಲೀಸರು, ಆರೋಪಿಗಳಿಂದ ಹಣ ಪಡೆದು ಕೇಸ್​ ಕೈಬಿಟ್ಟಿದ್ದರು. ಜೊತೆಗೆ ವಶಪಡಿಸಿಕೊಂಡಿದ್ದ ಗಾಂಜಾವನ್ನು ತಾವೇ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಡಿಸಿಪಿ ಕೆ.ರಾಮರಾಜನ್ ಅವರಿಗೆ ಪ್ರಕರಣದ ಕುರಿತು ತನಿಖೆ ಮಾಡಲು ಪೊಲೀಸ್ ಆಯುಕ್ತರು ಸೂಚಿಸಿದ್ದರು. ಡಿಸಿಪಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಆಯುಕ್ತರು ಇನ್ಸ್​ಪೆಕ್ಟರ್ ಸೇರಿ ಏಳು ಮಂದಿ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.

Last Updated : Oct 10, 2021, 12:28 PM IST

ABOUT THE AUTHOR

...view details