ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ 2021ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ನಿನ್ನೆ ಕೊನೆಯ ದಿನವಾಗಿತ್ತು. ಕಳೆದ ಒಂದೇ ದಿನದಲ್ಲಿ 478 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಮಹಾನಗರ ಪಾಲಿಕೆಯ 82 ವಾರ್ಡ್‍ಗಳಿಗೆ ಇಲ್ಲಿಯವರೆಗೆ ಒಟ್ಟು 577 ನಾಮಪತ್ರಗಳು ಸಲ್ಲಿಕೆಯಾಗಿವೆ.
ಹು-ಧಾ ಮಹಾನಗರ ಪಾಲಿಕೆ ಚುನಾವಣೆ: 577 ನಾಮಪತ್ರಗಳು ಸಲ್ಲಿಕೆ - 577 nomination submitted for Hubli Dharwad Municipal corporation Election
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇನ್ನು ಇಲ್ಲಿಯವರೆಗೆ ಒಟ್ಟು 577 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕಾಂಗ್ರೆಸ್-112, ಬಿಜೆಪಿ-121, ಜೆಡಿಎಸ್-55, ಎಎಪಿ-46, ಉತ್ತಮ ಪ್ರಜಾಕಿಯ-13, ಕರ್ನಾಟಕ ರಾಷ್ಟ್ರ ಸಮಿತಿ-6, ಎಐಎಮ್ಐಎಮ್-13, ಎಸ್ಡಿಪಿಐ-4 , ಬಿಎಸ್‍ಪಿ -7, ಆರ್ಪಿಐ (ಎ)-4, ಭಾರತ ಕಮ್ಯುನಿಸ್ಟ್ ಪಾರ್ಟಿ-1, ಕರ್ನಾಟಕ ಶಿವಸೇನಾ-5, ಕರ್ನಾಟಕ ಜನಸೇನಾ ಶಕ್ತಿ-1 ಮತ್ತು ಪಕ್ಷೇತರರು-189 ಜನ ಸೇರಿ ಒಟ್ಟು 577 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಅತ್ಯಂತ ಕಡಿಮೆ ನಾಮಪತ್ರ (2) ವಾರ್ಡ್ ಸಂಖ್ಯೆ 14ಕ್ಕೆ ಮತ್ತು ಅತಿ ಹೆಚ್ಚು ನಾಮಪತ್ರಗಳು (16) ವಾರ್ಡ್ ಸಂಖ್ಯೆ 24 ಮತ್ತು 28ಕ್ಕೆ ಸಲ್ಲಿಕೆಯಾಗಿವೆ. ನಾಮಪತ್ರ ಪರಿಶೀಲನೆ ಹಾಗೂ ನಾಮಪತ್ರ ಹಿಂತೆಗೆದುಕೊಂಡ ಮೇಲೆ ಕಣದಲ್ಲಿ ಎಷ್ಟು ಜನ ಉಳಿಯುತ್ತಾರೆ ಎಂಬುದರ ಮೇಲೆ ನಿಜವಾದ ಹಣಾಹಣಿ ಏರ್ಪಡಲಿದೆ.