ಕರ್ನಾಟಕ

karnataka

ETV Bharat / state

ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಮಳ್ಪವರಿಂದ ಕಂಡೆನ್ನುವ ಬಾಲಕನ ಜ್ಞಾನದ ಸೊಗಸು!

ಹುಬ್ಬಳ್ಳಿಯ ತಬೀಬಲ್ಯಾಂಡ್ ನಿವಾಸಿಗಳಾಗಿರುವ ಗಿರೀಶ ಗೌಡ ಪಾಟೀಲ, ಶಿವಲೀಲಾ ಪಾಟೀಲ ಅವರ 5 ವರ್ಷದ ಪುತ್ರ ಸಿದ್ದಾರ್ಥಗೌಡ ಪಾಟೀಲನ ಅಪಾರವಾದ ಜ್ಞಾನಕ್ಕೆ ಜನ ನಿಬ್ಬೆರಗಾಗಿದ್ದಾರೆ.

5 year old boy telling achievers name and indian history in hubli, dharwad district
ಐದು ವರ್ಷದ ಬಾಲಕನ ಜ್ಞಾನಕ್ಕೆ ಫಿದಾ ಆದವರೇ ಇಲ್ಲ!

By

Published : Jun 17, 2020, 1:41 PM IST

ಹುಬ್ಬಳ್ಳಿ:ದೇಶ-ವಿದೇಶದ ಗಣ್ಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ, ವಚನಗಳು, ತತ್ವಪದ ಹೀಗೆ ಹತ್ತು ಹಲವಾರು ಕ್ಷೇತ್ರದ ಸಾಧಕರ ಸಾಧನೆಗಳನ್ನು ಲೀಲಾಜಾಲವಾಗಿ ಹೇಳುವ ಮೂಲಕ ಇಲ್ಲೊಬ್ಬ ಪುಟ್ಟ ಬಾಲಕ ಎಲ್ಲರನ್ನೂ ಚಕಿತಗೊಳಿಸುತ್ತಿದ್ದಾನೆ.

ಐದು ವರ್ಷದ ಬಾಲಕನ ಜ್ಞಾನಕ್ಕೆ ಫಿದಾ ಆಗದವರುಂಟೇ?

ಹುಬ್ಬಳ್ಳಿಯ ತಬೀಬಲ್ಯಾಂಡ್ ನಿವಾಸಿಗಳಾಗಿರುವ ಗಿರೀಶಗೌಡ ಪಾಟೀಲ, ಶಿವಲೀಲಾ ಪಾಟೀಲರ ಪುತ್ರ ಸಿದ್ದಾರ್ಥಗೌಡ ಪಾಟೀಲ ಎರಡರ ಹರೆಯದಲ್ಲೇ ತನ್ನಲ್ಲಿ ಅಗಾಧ ಜ್ಞಾನ ಶಕ್ತಿಯಿದೆ ಎಂದು ಸಾಬೀತು ಮಾಡಿದ್ದಾನೆ. ವಿವಿಧ ಕ್ಷೇತ್ರದ ಸಾಧಕರು, ಮಹಾನ್ ಚಿಂತಕರು, ಸ್ವಾತಂತ್ರ್ಯ ಹೋರಾಟಗಾರರು ಸೇರಿ ಸುಮಾರು 550 ಚಿತ್ರಪಟಗಳನ್ನು ಗುರುತಿಸಿ ಅವರ ಸಾಧನೆ ಹೇಳಬಲ್ಲ ಈ ಬಾಲಕ‌.

ಇಷ್ಟು ಮಾತ್ರವಲ್ಲ, 350ಕ್ಕೂ ಹೆಚ್ಚು ಕಂಪನಿಯ ಲೋಗೊ, ಧಾರ್ಮಿಕ ಚಿಹ್ನೆಗಳು ಈತನ ಸ್ಮೃತಿಪಟಲದಲ್ಲಿದೆ. ರಾಜ್ಯಗಳ ಇತಿಹಾಸ, ಗಾದೆ ಮಾತುಗಳು ಅವುಗಳ ಭಾವಾರ್ಥ, ಖ್ಯಾತ ಕ್ರೀಡಾಪಟುಗಳು, ಗಣಿತ ಶಾಸ್ತ್ರಜ್ಞರು, ವಿಜ್ಞಾನಿಗಳು, ಸಂಗೀತಗಾರರು, ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳಾದಿಯಾಗಿ ಹಲವಾರು ವಿಷಯಗಳನ್ನು ಅರಳು ಹುರಿದಂತೆ ಈ ಬಾಲಕ ಹೇಳಬಲ್ಲ. ತನ್ನ ಜ್ಞಾನ ಭಂಡಾರವನ್ನು ಜಗತ್ತಿನೆದುರು ತೆರೆದಿಟ್ಟು ಗಿನ್ನಿಸ್ ದಾಖಲೆ ಬರೆಯಬೇಕೆಂಬ ಮಹದಾಸೆ ಈ ಬಾಲಕನಲ್ಲಿದೆ.

ಎರಡನೇ ವಯಸ್ಸಿನಲ್ಲಿರುವಾಗಲೇ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿರುವ ಸಿದ್ದಾರ್ಥಗೌಡ ಪಾಟೀಲ, ದಿನದಲ್ಲಿ 45 ನಿಮಿಷಗಳ ಕಾಲ ಆಧ್ಯಾತ್ಮಕ್ಕೆ ಸಮಯ ಮೀಸಲಿಡುತ್ತಾನೆ. ಈ ಮೂಲಕ ಲಿಂಗಪೂಜೆ-ಧ್ಯಾನದಲ್ಲಿ ತೊಡಗುತ್ತಿರುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾನೆ.

ABOUT THE AUTHOR

...view details