ಹುಬ್ಬಳ್ಳಿ:ಲಂಡನ್ನಿಂದ ಪಾರ್ಸಲ್ ಬಂದಿದೆ. ಅದನ್ನು ಪಡೆಯಲು ವಿವಿಧ ಶುಲ್ಕಗಳನ್ನು ಕಟ್ಟಬೇಕು ಎಂದು ನಂಬಿಸಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಪಾರ್ಸಲ್ ಹೆಸರಿನಲ್ಲಿ ದೋಖಾ: ಹುಬ್ಬಳ್ಳಿಯಲ್ಲಿ ಯುವಕನಿಗೆ 5 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ವಿದೇಶದಿಂದ ದುಬಾರಿ ಗಿಫ್ಟ್ ಪಾರ್ಸಲ್ ಬಂದಿದೆ ಹೇಳಿ ಹುಬ್ಬಳ್ಳಿ ಮೂಲದ ಯುವಕನೊಬ್ಬನನ್ನು ಯಾಮಾರಿಸಿ 5 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಯುವಕನಿಗೆ 5 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಹುಬ್ಬಳ್ಳಿಯ ನವನಗರ ನಿವಾಸಿ ಪ್ರಮೋದ್ ಕುಲಕರ್ಣಿ ವಂಚನೆಗೊಳಗಾಗಿರುವ ಯುವಕ. ಲಂಡನ್ನಿಂದ ದುಬಾರಿ ಬೆಲೆಯ ಗಿಫ್ಟ್ ನೀಡುವುದಾಗಿ ಆಮಿಷವೊಡ್ಡಿ ಮನೆಗೆ ಕೊರಿಯರ್ ಪಾರ್ಸಲ್ ಕಳಿಸುವುದಾಗಿ ಹೇಳಿದ ಇಬ್ಬರು ಅಪರಿಚಿತರು ಹಿಂದಿ ಭಾಷೆಯಲ್ಲಿ ಲಂಡನ್ನಿಂದಲೇ ವಾಟ್ಸ್ಯಾಪ್ ಕಾಲ್, ಚಾಟ್ ಮಾಡಿ, ಮಾತನಾಡಿ ನಂಬಿಕೆ ಬರುವಂತೆ ಮಾಡಿದ್ದಾರೆ. ಬಳಿಕ ಪ್ರಮೋದ್ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 5,15,549 ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ.
ಈ ಕುರಿತಂತೆ ಇದೀಗ ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.