ಹುಬ್ಬಳ್ಳಿ:ಇಲ್ಲಿನ ಸುತಗಟ್ಟಿ ಕಾನೂನು ವಿಶ್ವವಿದ್ಯಾಲಯ ಬಳಿ ಮಂಗಳವಾರ ರಾತ್ರಿ ಕೆಎಸ್ಆರ್ಪಿ ಕಾನ್ಸ್ಟೇಬಲ್ ಕೊಲೆ ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದೆ. ಕಾನ್ಸ್ಟೇಬಲ್ ಅವರ ಮಕ್ಕಳೇ ಕತ್ತು ಹಿಸುಕಿ ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಕೆಎಸ್ಆರ್ಪಿ ಕಾನ್ಸ್ಟೇಬಲ್ ಇಸ್ಮಾಯಿಲ್ಸಾಬ್ ಅವರನ್ನು ಕಾನೂನು ವಿಶ್ವವಿದ್ಯಾಲಯ ಬಳಿ ಕೊಲೆ ಮಾಡಲಾಗಿತ್ತು. ಕಾನ್ಸ್ಟೇಬಲ್ರ ಇಬ್ಬರು ಮಕ್ಕಳು ಸೇರಿ ಐವರನ್ನು ಎಪಿಎಂಸಿ ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಸ್ಮಾಯಿಲ್ಸಾಬ್ ಪುತ್ರ ಫಕುಸಾಬ್ ಕಿಲ್ಲೇದಾರ, ಆತನ ಸ್ನೇಹಿತರಾದ ಶಿವಮೊಗ್ಗ ಜಿಲ್ಲೆಯ ಈಶ್ವರ ಅರಿಕಟ್ಟಿ, ಶಿವಕುಮಾರ ಆರಿಕಟ್ಟಿ, ರೋಹನ್ ಕರಾ, ಇಸ್ಮಾಯಿಲ್ ಪುತ್ರಿ ಗದಗ ಹುಡ್ಕೋ ನಿವಾಸಿ ದಾವಲಮುನ್ನಿ ಕಾಲೇಖಾನ್ ಬಂಧಿತ ಆರೋಪಿಗಳಾಗಿದ್ದಾರೆ.