ಕರ್ನಾಟಕ

karnataka

ETV Bharat / state

ಕಲಘಟಗಿ ಶಾಲೆಯಲ್ಲಿ ಹೃದಯಾಘಾತದಿಂದ 4ನೇ ತರಗತಿ ಬಾಲಕ ಸಾವು.. - Etv Bharat Kannada

ಬಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಹುಬ್ಬಳಿಯ ಶಾಲೆಯೊಂದರಲ್ಲಿ ನಡೆದಿದೆ.

Kn_hbl_
ಮೃತ ಬಾಲಕ

By

Published : Dec 2, 2022, 3:14 PM IST

ಹುಬ್ಬಳ್ಳಿ: ಹೃದಯಾಘಾತದಿಂದ ಶಾಲೆಯಲ್ಲಿಯೇ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಕಲಘಟಗಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ನಡೆದಿದೆ.

ಮೃತ ಬಾಲಕ ಮುಕ್ತುಂ ಮಹ್ಮದ್​ರಫಿ ಮನಿಯಾರ ಎಂದು ತಿಳಿದು ಬಂದಿದ್ದು, ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.‌ ವಿದ್ಯಾರ್ಥಿ ಕಲಘಟಗಿ ನಿವಾಸಿಯಾಗಿದ್ದು, ಬಾಲಕನಿಗೆ ಈ ಮುಂಚೆಯೇ ಹೃದಯದ ಸಮಸ್ಯೆ ಇತ್ತು ಎನ್ನಲಾಗಿದೆ.

ಎಂದಿನಂತೆ ಇಂದು ಬೆಳಗ್ಗೆ ರಫಿ ಶಾಲೆಗೆ ಬಂದಿದ್ದ ವೇಳೆ ಏಕಾಎಕಿ ಕ್ಲಾಸಿನಲ್ಲಿಯೇ ಕುಸಿದು ಬಿದ್ದಿದ್ದಾನೆ. ನಂತರ ಶಿಕ್ಷಕರು ಕೂಡಲೇ ಅವನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಾದರೂ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ.

ಇದನ್ನೂ ಓದಿ:ಮಕ್ಕಳನ್ನೂ ಬಿಡದೆ ಕಾಡುತ್ತಿದೆ ಹೃದಯಾಘಾತ: ತಂದೆಯ ಕಣ್ಣೆದುರೇ ಕುಸಿದು ಬಾಲಕ ಸಾವು

ABOUT THE AUTHOR

...view details