ಹುಬ್ಬಳ್ಳಿ: ಕಟ್ಟಡ ಕೂಲಿ ಕೆಲಸಕ್ಕೆ ತೆರಳಿದ್ದ 40 ಕಟ್ಟಡ ಕಾರ್ಮಿಕರನ್ನು ಸಂಶಿ ಗ್ರಾಮದ ಚಕ್ ಪೋಸ್ಟ್ ನಲ್ಲಿ ನಿನ್ನೆ ರಾತ್ರಿ ತಪಾಸಣೆ ನಡೆಸಲಾಯಿತು.
ಗೋವಾದಿಂದ ಬಂದ 40 ಕಾರ್ಮಿಕರಿಗೆ ಮಧ್ಯರಾತ್ರಿಯೇ ವೈದ್ಯಕೀಯ ತಪಾಸಣೆ - 40 ಕಾರ್ಮಿಕರಿಗೆ ಮದ್ಯ ರಾತ್ರಿಯೆ ವೈದ್ಯಕೀಯ ತಪಾಸಣೆ
ಶನಿವಾರ ತಡ ರಾತ್ರಿ ಕುಂದಗೋಳ ತಾಲೂಕಿನ ಸಂಶಿ ಗ್ರಾಮಕ್ಕೆ ಗೋವಾದಿಂದ ಬಂದಿದ್ದ ಕಾರ್ಮಿಕರನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.
ತಡ ರಾತ್ರಿ ಕುಂದಗೋಳ ತಾಲೂಕಿನ ಸಂಶಿ ಗ್ರಾಮಕ್ಕೆ ಗೋವಾದಿಂದ ಕಾರ್ಮಿಕರು ಆಗಮಿಸಿದ್ದರು. ಸಂಶಿ ಗ್ರಾಮದ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದರು. ಕಟ್ಟಡ ಕಾರ್ಮಿಕರ ಸಂಪೂರ್ಣ ಮಾಹಿತಿ ಕಲೆ ಹಾಕಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಯಿತು.
ಕೂಡಲೇ ಸ್ಥಳಕ್ಕಾಗಮಿಸಿದ ಕುಂದಗೋಳ ಇನ್ಸ್ಪೆಕ್ಟರ್ ಬಸವರಾಜ ಕಲ್ಲಮ್ಮನವರ, ತಹಶಶೀಲ್ದಾರ ಬಸವರಾಜ ಬೆಳವಂಕಿ ಸೇರಿದಂತೆ ಹಲವು ಅಧಿಕಾರಿಗಳ ನೇತೃತ್ವದಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಕೂಲಿ ಕಾರ್ಮಿಕರು ಗುಡಗೇರಿ ಗ್ರಾಮದವರಾಗಿದ್ದು, ಅವರ ಸಂಪೂರ್ಣ ಮಾಹಿತಿ ಪಡೆದು ಅಧಿಕಾರಿಗಳು ಮನೆಗೆ ಕಳಿಸಿದರು.