ಕಲಘಟಗಿ: ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಐದು ವರ್ಷದ ಬಾಲಕಿ ಸೇರಿದಂತೆ ಮತ್ತೆ ನಾಲ್ಕು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ದಾಸ್ತಿಕೊಪ್ಪ ಗ್ರಾಮದ ನಾಲ್ವರಿಗೆ ಕೊರೊನಾ... ಸೋಂಕು ನಿಯಂತ್ರಣಕ್ಕೆ ಜನಜಾಗೃತಿ - Kalagatagi darwada latest news
ನಾಲ್ಕು ಜನರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆ ದಾಸ್ತಿಕೊಪ್ಪ ಗ್ರಾಮದ ಜನತೆ ಆತಂಕಗೊಂಡಿದ್ದು, ಕೊರೊನಾ ತಡೆಗಟ್ಟುವ ಉದ್ದೇಶದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.

ನಾಲ್ಕು ಜನರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆ ಗ್ರಾಮದ ಜನತೆ ಆತಂಕಗೊಂಡಿದ್ದು, ಕೊರೊನಾ ತಡೆಗಟ್ಟುವ ಉದ್ದೇಶದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಈ ಮೊದಲು ಗ್ರಾಮದಲ್ಲಿ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಗುರುವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಾಹಿತಿಯಂತೆ ದಾಸ್ತಿಕೊಪ್ಪದಲ್ಲಿ 5 ವರ್ಷದ ಬಾಲಕಿ, 60 ವರ್ಷದ ವೃದ್ಧೆ, 34 ವರ್ಷದ ಮಹಿಳೆ, 28 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇವರು ಪಿ-16946 ಜೊತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಸದ್ಯ ಇವರನ್ನು ಚಿಕಿತ್ಸೆಗೊಳಪಡಿಸಲಾಗಿದೆ.
ಗ್ರಾಮದಲ್ಲಿ ಆರೋಗ್ಯ ಸಮೀಕ್ಷೆ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಈ ವೇಳೆ ನಿಂಯತ್ರಿತ ಪ್ರದೇಶದ ಕಮಾಂಡರ್ ಗಂಗಾಧರ ಗುಮ್ಮಗೊಳಮಠ, ತಾಪಂ ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಬಸವರಾಜ ಹುಗ್ಗಿ, ಪಿಡಿಒ ಗುಳಪ್ಪ ಪೂಜಾರ, ಪರಶುರಾಮ ಪತ್ರಣ್ಣವರ, ಮೇಲ್ವಿಚಾರಕರಾದ ಎಂ.ಬಿ.ಲಗಳಿ, ಬಸವರಾಜ ಬೇವಿನಗಿಡದ, ಶ್ರಿದೇವಿ ಬಡಿಗೇರ ಹಾಗೂ ಗ್ರಾಪಂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.