ಹುಬ್ಬಳ್ಳಿ: ನಗರದ ವಲ್ಲಭಭಾಯಿನಗರದ ಸಮೀಪ ಅಕ್ರಮವಾಗಿ ಅಫೀಮು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಶಹರ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಅಫೀಮು ಮಾರುತ್ತಿದ್ದ ನಾಲ್ವರು ಅಂದರ್ - opium seized in hubli
ಹುಬ್ಬಳ್ಳಿ ನಗರದ ವಲ್ಲಭಭಾಯಿನಗರದ ಸಮೀಪ ಅಫೀಮು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ 65,000 ಮೌಲ್ಯದ 550 ಗ್ರಾಂ ಅಫೀಮನ್ನು ವಶಪಡಿಸಿಕೊಳ್ಳಲಾಗಿದೆ.

ಅಫೀಮು ಮಾರುತ್ತಿದ್ದ ನಾಲ್ವರ ಬಂಧನ
65,000 ಮೌಲ್ಯದ 550 ಗ್ರಾಂ ಅಫೀಮು ಜೊತೆಗೆ 2,070 ರೂ ನಗದು, ಹಾಗೂ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ನಾಲ್ವರು ಆರೋಪಿಗಳು ಮೂಲತಃ ರಾಜಸ್ಥಾನ ಮೂಲದವರಾಗಿದ್ದು, ಸದ್ಯ ಹೊಸಪೇಟೆಯ ಕೌಲಪೇಟೆಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ದೇವಾರಾಮ ಅಂಬಾರಾಮ ಪಟೇಲ, ಕುಂದನ ಮನ್ಸರಾಮ ಸುತಾರ, ಪ್ರವೀಣಕುಮಾರ ಸೆಂದಾರಾಮ ಲೋಹಾರ ಹಾಗೂ ನರೇಶಕುಮಾರ ಭಾಗೀರಥ ಶರ್ಮಾ ಬಂಧಿತ ಆರೋಪಿಗಳು. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.